Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer

ShreDo ✏️

Drama Tragedy Others

3  

ShreDo ✏️

Drama Tragedy Others

ಮರಳಿ ಮತ್ತೆ ಬರುವೆಯಾ?

ಮರಳಿ ಮತ್ತೆ ಬರುವೆಯಾ?

1 min
259


ಮತ್ತೆ ಬರುವೆನೆಂದು ಹೇಳಿ ಹೋದ ನೀ,

ನಿಜವಾಗಲೂ ಮರಳಿ ಬರುವೆಯಾ?

ಬಿಟ್ಟು ಹೋಗಿ ಕಳೆಯಿತು ನಾಲ್ಕು ಸಂವತ್ಸರಗಳು,

ಮತ್ತೆ ಮರಳಿ ಬರುವೆಯಾ?


ನಿನ್ನ ಮುದ್ದಿಗಾಗಿ ಕಾಯುವ ಆ ಕಂದಮ್ಮನಿಗೆ,

ನಾ ಏನೇನ್ನಲಿ?

ನಿರೀಕ್ಷೆ ಮಾಡಬೇಡ ಕಂದಾ, ಎನ್ನಲೇ?

ಆ ಹಸುಗೂಸಿಗಾಗಿಯಾದರು ಮರಳಿ ಬರುವೆಯಾ?


ನಿನ್ನ ಆಗಮನದ ಅಭಿಲಾಷೆಯಲ್ಲಿ,

ಕಳೆಯುತಿಹ ಪ್ರತಿ ಘಳಿಗೆಯೂ,

ಭಾಸವಾಗುವುದು ಯುಗದಂತೆ,

ಇನ್ನಾದರೂ ಸತಾಯಿಸಬೇಡವೋ,

ಹೇಳು ನೀ ಮತ್ತೆ ಮರಳಿ ಬರುವೆಯಾ?



Rate this content
Log in