ನೀನೇಕೆ ಎಲ್ಲರಂತಲ್ಲ?
ನೀನೇಕೆ ಎಲ್ಲರಂತಲ್ಲ?
ಹಗಲಿನ ಬೆಳಕ ಮಧ್ಯೆಯೂ
ನೀ ಕತ್ತಲೆ ತೋರಿಸಬಲ್ಲೆ
ಗವ್ವೆನ್ನುವ ಕತ್ತಲಲ್ಲೂ
ಬೆಳದಿಂಗಳ ಹೊಳಪು ತೋರಿಸಬಲ್ಲೆ
ಹೌದು, ಅಂತದ್ದೇನಿದೆ ನಿನ್ನ ಬಳಿ?
ನೀನೇಕೆ ಎಲ್ಲರಂತಲ್ಲ?
ಜಗತ್ತೊಂದೆಡೆಯಾದರೆ ನಿನೊಂದೆಡೆ ನಿಲ್ಲುವೆ
ಆಗಲೂ ನಾನು ಜಗವ ಮರೆತು ನಿನ್ನೇ ಅಪ್ಪುವೆ
ನೀನೊಂದು ಮಾಯೆಯೇ ಸರಿ
ಸದಾ ನಿನ್ನೆದೆಯಲ್ಲೆ ಟಿಕಾಣಿ ಹೂಡುವೆ, ಡೊಂಟ್ ವರಿ!

