ಮಳೆ
ಮಳೆ
ಜಿನುಗುತಿದೆ ಮಳೆಯ ಧಾರೆ
ಧರೆಗಿಳಿದು ಬಂದಿದೆ ಸಗ್ಗದ ಆಸರೆ
ವಸುಧೆಗೆ ಒಲುಮೆಯ ಕರೆ
ಜೀವಚರಗಳಿಗೆ ಪ್ರೀತಿಯ ಅಕ್ಕರೆ!!
ಜೀವಗಳಿಗೆ ಮಳೆಯೇ ಆದ್ಯತೆ
ನೀರಾಗಿ ಬೆಳಕ ಚೆಲ್ಲುವ ಹಣತೆ
ಮಳೆಯಲಿ ಪ್ರಕೃತಿಯ ರಮಣೀಯತೆ
ಹನಿಹನಿಯಾಗಿ ಮೂಡುವ ಮುತ್ತೇ!!
ರೈತರ ಮೊಗದಲಿ ಹರ್ಷವಾದೆಯೋ
ಪ್ರಾಣಿಪಕ್ಷಿಗಳಿಗೆ ಜೀವವಾದೆಯೋ
ಪ್ರಕೃತಿಗೆ ಹಸಿರ ಬಣ್ಣ ಹಚ್ಚಿದೆಯೋ
ಭೂಗಳಕೆ ಹರುಷದ ಸ್ವರ್ಗವಾದೆಯೋ!!