ಮೋಸ
ಮೋಸ
ಬದುಕು ಹಲವು ಘಟ್ಟಗಳ ಅಲೆ
ಹರಿಯುತಿದೆ ಅವಕಾಶಗಳ ಮಾಲೆ
ಅದ ಬಳಿಸಿಕೊಳ್ಳುವುದೇ ಕಲೆ
ಅದರಲ್ಲಿ ಹಿಗ್ಗುವುದು ಜೀವನದ ಬೆಲೆ!!
ಅವಕಾಶಗಳನ್ನು ಕಳೆದುಕೊಂಡಂತೆ
ನಿನಗೆ ನೀನೇ ಮೋಸವೆಸಿಗಿದಂತೆ
ಕ್ಷೀಣಿಸುವುದು ನಿನ್ನ ವೃದ್ಧಿಯ ಖಾತೆ
ಕಾವಳದಲಿ ನಿನ್ನ ಜೀವನದ ಹಣತೆ!!
ಸಾಗುತ ಅವಕಾಶಗಳ ಹಾದಿಯಲಿ,
ಮೈಲಿಗಲ್ಲುಗಳನು ಶ್ರದ್ದೆಯಲಿ ಕ್ರಮಿಸುತಲಿ,
ಗಮ್ಯವು ನಿನಗಾಗಿ ಹತ್ತಿರವಾಗುತಲಿ,
ಜೀವನವು ಸರಳ ಸುಗಮದೆಡೆಯಲಿ!!
