ನೀ ಬರೆದ ಸಂಕಲನ
ನೀ ಬರೆದ ಸಂಕಲನ
ಮೊರೆವ ಅಲೆಗಳ ಮಧುರ ನರ್ತನ,
ಮನದಲ್ಲಿ ಆವರಿಸಿದೆ ಘೋರ ಮೌನ,
ಕಣ್ಣೇರ ಹನಿಗಳಲಿ ಮಿಂದಿದೆ ನಯನ,
ಓದುತಿರೆ ನೀ ಬರೆದ ಸಂಕಲನ!!
ಮನಮುಟ್ಟುವ ಭಾವನೆಗಳ ಸಂವೇದನೆ,
ನನಗಾಗಿ ಸದಾ ಮಿಡಿವ ಪ್ರೇಮಭಾವನೆ,
ನನಗಾಗಿ ಕಟ್ಟಿದ ಅಮರ ಪ್ರೀತಿಯ ಕಲ್ಪನೆ,
ಕಣ್ತುಂಬಿ ಬಂದಿದೆ ಈ ಅಮೋಘ ರಚನೆ!!
ನೀ ಬರೆದ ಪ್ರೇಮ ಸಂಕಲನ ಆತ್ಯುತ್ತಮ
ಸಾಗರಕ್ಕೂ ಮೀರಿದೆ ನಿನ್ನ ಅದ್ಬುತ ಪ್ರೇಮ
ಹೃನ್ಮನ ಕಾಯುತಿದೆ ನಮ್ಮ ಸಮಾಗಮ
ಸಾಲುಗಳ ಅಲೆಗಳು ಸೇರಿದೆ ನನ್ನ ಅತ್ಮ

