ಬೀಜಾಕ್ಷರವಾಗಿ ಮರಳಿ ನಿಂತಿಹೆನು!
ಬೀಜಾಕ್ಷರವಾಗಿ ಮರಳಿ ನಿಂತಿಹೆನು!
ಹೆತ್ತ ಕರುಳ, ಹೊತ್ತ ಹೆಗಲ,
ಕಣ್ಣಂಚಿನ ಕಣ್ಪನಿಯೊಳು,
ಮುಗಿಲ ತೀಡಿ, ಮನದಿ ಮಿಡಿದು,
ಮಿಂಚುವ ಕಣ್ಣೋಟದೊಳು,
ಒಸಿ ನರಳಿ, ತುಸು ಅರಳಿ,
ಹೆಜ್ಜೆಗಳ ಸಾಲಿಗೆ ಪುನರ್ಮರಳಿ,
ಕೈಗೂಡಿಸಿ, ಶಾಹಿಯಾಗಿರಲು,
ಬದುಕೆಂಬ ಲೇಖನಿಯ ನಾ ಹಿಡಿದಿರಲು,
ಬೀಜರೂಪದಿ ಇಳೆಯ ಬಿರಿದು,
ಹೆಮ್ಮರವಾಗಿ ಋತುಮಾನದಿ ಬೆಳೆದು,
ಆಳದಲಿ ಬೇರಾಗಿ, ರೂಪದೊಳು ನೂರಾಗಿ,
ಧರೆಗುರುಳಿಯೂ ಬೀಜಾಕ್ಷರವಾಗಿ ಮರಳಿ ನಿಂತಿಹೆನು.
