STORYMIRROR

Someshwar Gurumath

Classics Inspirational Others

4  

Someshwar Gurumath

Classics Inspirational Others

ಸಾರಿ ಸಾರಿ ಹೇಳುತಿದೆ.

ಸಾರಿ ಸಾರಿ ಹೇಳುತಿದೆ.

1 min
1.1K

ಬಾನಿಂದ ಜಾರಿದ,

ಹನಿಯೊಂದು ಸಾಗರ ಸೇರಿ,

ನವಿರಾಗಿ ಮೇಲೇರಿ,

ಇಳೆಯಂತರಂಗವ ಸ್ಪರ್ಶಿಸಿದಂತೆ.

ಆ ನಿನ್ನ ಮೃದುವಾದ ಪಾದಗಳ,

ಸವಿಯಾದ ಸಂಭಾಷಣೆಯ,

ಸದಾ ಬೆನ್ನೇರಿ ಎತ್ತುವ,

ರಕ್ಷಕನಾಗಿ ನಾ ನಿಲಲೇ.

ದಾರಿ ಬದಲಾದರೂ,

ಹೆಜ್ಜೆಯ ಮರೆಯದು,

ಚಿಗುರಾಸೆಯ ಬಚ್ಚಿಟ್ಟರೂ,

ಎದೆತಾಳವು ತಪ್ಪದು.

ತಿಳಿಯದ ಮನವಿಂದು,

ತಿಳಿದೂ ತಿಳಿಯಾಗದೆ,

ಕಳೆದ ಪರ್ವಗಳನೇ,

ಮರಳಿ ತಿರುವುತಿದೆ.

ಅನುಭವದ ಸಾರವೂ,

ಅನುರಾಗಿಯ ಕಥನಕನುವಾಗಿ,

ಶಿಲ್ಪದೊಳು ಕೆತ್ತಿದ ಸಾಲುಗಳ,

ಸಾರಿ ಸಾರಿ ಹೇಳುತಿದೆ.


Rate this content
Log in

Similar kannada poem from Classics