STORYMIRROR

Gireesh pm Giree

Abstract Drama Inspirational

4  

Gireesh pm Giree

Abstract Drama Inspirational

ಕಾರ್ಗಿಲ್ ವಿಜಯ

ಕಾರ್ಗಿಲ್ ವಿಜಯ

1 min
252

ದೇಶದ ಪಾಲಿಗೆ ಮರೆಯದ ದಿನ

 ದೇಶವೇ ಆ ದಿನ ಮೆರೆದ ಕ್ಷಣ 

ಭಾರತದ ಆಪರೇಷನ್ ವಿಜಯ 

ತಂದು ಕೊಟ್ಟಿತು ದಿಗ್ವಿಜಯ


ಸುದೀರ್ಘ ದಿನದ ಕೆಚ್ಚೆದೆಯ ಹೋರಾಟ

ಕೊನೆಗೂ ಮೆಟ್ಟಿ ನಿಂತರು ಪಾಪಿಗಳ ಹಾರಾಟ

ತ್ರಿವರ್ಣ ಧ್ವಜ ಹಾರಿತು ಅಲ್ಲಿ

ಸಂತಸಕ್ಕೆ ಪಾರವೇ ಇರಲಿಲ್ಲ ಇಲ್ಲಿ


ವೈರಿಗಳ ಕನಸಲ್ಲೂ ಕಾಣುವ ಧೀರ

ದೇಶದ್ರೋಹಿಗಳ ರುಂಡ ಚೆಂಡಾಡಿದ ವೀರ

ಬಲಿದಾನಕ್ಕೆ ಸಿಕ್ಕ ಗೆಲುವಿನ ಹಾರ

ಭಾರತ ದೇಶದ ಹೆಮ್ಮೆಯ ಕುವರ 


ಸ್ಮರಿಸೋಣ ಈ ದಿನ 

ನೆನೆಯೋಣ ಅನುದಿನ

ನೆನೆಯಲಿ ನಮ್ಮ ಮನ

ನಮ್ಮವರಿಗಾಗಿ ಒಂದು ಕ್ಷಣ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract