ಯಶಸ್ಸಿನ ಗುಟ್ಟು
ಯಶಸ್ಸಿನ ಗುಟ್ಟು
ಸುಮ್ಮನೆ ದಕ್ಕುವುದಿಲ್ಲ ಯಶಸ್ಸು
ಅದರ ಬೆನ್ನ ಹಿಂದೆ ತಿರುಗಬೇಕು
ಬಿಡದೆ ಗುರಿಯನ್ನು ಮುಟ್ಟಬೇಕು
ಸುಮ್ಮನೆ ದಕ್ಕುವುದಿಲ್ಲ ಯಶಸ್ಸು
ಅದರ ಹಿಂದೆ ಪರಿಶ್ರಮವಿರಬೇಕು
ಗುರಿಯ ಕಡೆ ಗಮನ ಕೊಡಬೇಕು
ಸುಮ್ಮನೆ ದಕ್ಕುವುದಿಲ್ಲ ಯಶಸ್ಸು
ಅದರದೇ ನಿತ್ಯ ಧ್ಯಾನ ಮಾಡಬೇಕು
ಗುರಿಯತ್ತಲೇ ಹೆಜ್ಜೆಗಳನ್ನು ಹಾಕಬೇಕು
ಸುಮ್ಮನೆ ದಕ್ಕುವುದಿಲ್ಲ ಯಶಸ್ಸು
ಅದನ್ನು ಪಡೆಯಲು ಕಷ್ಟ ಪಡಬೇಕು
ಗುರಿಯನ್ನು ಮುಟ್ಟುವೆನ್ನೆಂಬ ಛಲಬೇಕು
