####ಋಣಭಾರ###
####ಋಣಭಾರ###
ಸರಳತೆಗೆ ಮತ್ತೊಂದು ಹೆಸರು ನೀನೆಂದು
ಬರಲಪ್ಪಣೆಯಿಲ್ಲದೆ ಒಲಿದೆ ನಿನಗೆ
ಕರೆದು ಅಕ್ಕರೆತೋರುವೆಯೆಂದು
ನೂರೆಂಟು ಕನಸ ಕಂಡು ಕನಲಿದೆ
ಬರಸೆಳೆದು ಅಪ್ಪಲಿಲ್ಲ ನೀ ಎನ್ನನು
ಕರಪಿಡಿದು ಹಿತನುಡಿಯಲಿಲ್ಲ
ಸರಸದಲಿ ಅನುರಾಗ ಸ್ಪುರಿಸಲಿಲ್ಲ.
ಬೆರೆಸಲಿಲ್ಲ ಒಲವ ಕಾತರಿಸಲಿಲ್ಲ.
ಆದರೂ ನೋಡು ನಾನಿನಗೇ ಒಲಿದೆ
ಹಸನಾದ ಬಾಳು ವ್ಯಸನವಾದುದೇಕೆ
ಹೊಸೆದ ಭಾವಗಳ ಚೆಲ್ಲಾಪಿಲ್ಲೆಯಾಗಿಸಿದ್ದೇಕೆ
ಕಸಿಯಬೇಡ ಕನಸುಗಳ ಗೋಪುರ
ಅದರೊಳಿದೆ ನಿನ್ನದೇ ಬಿಂಬ ಮುರ್ತಿ
ಕದಡಿದೊಡೆ ಚಿತ್ತ ರಾಡಿಯಾದೀತು
ನಡೆದುಬಿಡು ದೂರ ಚಿತ್ತ ಬಯಸಿದೆಡೆಗೆ
ಮಾಡೆನ್ನನು ಮುಕ್ತಳನ್ನಾಗಿ ಈ ಋಣಭಾರದಿಂದ....