ಬರಲಪ್ಪಣೆಯೇ?
ಬರಲಪ್ಪಣೆಯೇ?
ಗೋಡೆಗೆ ಮೊಳೆ ಹೊಡೆದ್ಹಂಗಾತೋ ಹುಡುಗಾ
ಕನಸಲ್ಲಿ ನೀ ಬಂದು ಮನಸಿನ್ ಬಾಗಿಲು ತಟ್ಟಿದಾಗಾ
ಬೆಚ್ಚಿ ಕಣ್ತೆರೆದಾಗ, ಕನಸೆಲ್ಲ ಅಳಿಸಿಹೋಯ್ತು
ನೀ ಮಾತ್ರ ಯಾಕೋ ಅಲ್ಲೇ ನಿಂತಿದ್ಹಂಗಿತ್ತು..
ಸ್ವಲ್ಪ ನಯಾ ನಾಜೂಕು ಇರಬೇಕು ಕಣೋ
ಬರಲಪ್ಪಣೆಯಿದೆಯೇ ಅಂತ ಕೇಳೋದಲ್ವಾ.
ಆಗ ನಾ ಹೇಳ್ತಿದ್ದೆ, ಮನಸನ್ನು ಗೆಲ್ಲೋ ನೀನು
ಮನಸಲ್ಲೇ ನಿಲ್ಲೋ ಮುನ್ನ, ಹಂಗಾದ್ರೆ ಬಾ ಎಂದು.

