STORYMIRROR

JAISHREE HALLUR

Drama Romance Action

4  

JAISHREE HALLUR

Drama Romance Action

ನೀ ಹಿಂಗ ಹಿಂಡಿದರ ಗಲ್ಲಾ!!!!

ನೀ ಹಿಂಗ ಹಿಂಡಿದರ ಗಲ್ಲಾ!!!!

1 min
229


ನೀ ಹಿಂಗ ಹಿಂಡಿದರ ಗಲ್ಲಾ

ಅಲ್ಲಿ ತುಳುಕುತಾವ ಮನದಾಗಿನ ಆಸೆಗಳು ನಲ್ಲಾ..

ಬೊಗಸೆಗೂ ಸಾಲದಲ್ಲಾ, 

ಚೆಲ್ಲಿ ಹರಿದಾಡತಾವಲ್ಲಾ..


ನೀ ಹಿಂಗ ಹಿಂಡಿದರ ಗಲ್ಲಾ

ಕುಣಿದಾಡುತಾವ ಹೊಸ ಭಾವನೆಗಳು 

ಮಣಿಯದೆ ತಣಿಯದೆ ಉಳಿದ ಕನಸುಗಳು


ನೀ ಹಿಂಗ ಹಿಂಡಿದರ ಗಲ್ಲಾ

ತುಟಿಯರಳಿ ಕಂಪಿಸುತಾವ ನೂರು ಬಯಕೆ ಸೂಸಿ

ಪುಟಿದೇಳುವ ಒಲವಿನಲೆಯಲಿ ತೇಲಬಯಸಿ


ನೀ ಹಿಂಗ ಹಿಂಡಿದರ ಗಲ್ಲಾ

ನೋಯುತಾವ ರಂಗೇರಿ ತುಸು ಮುನಿಸಿನಲಿ

ಸುಪ್ತ ಮನಕೂ ಇನ್ನೇನೋ ಬೇಕೆಂಬ ತವಕದಲಿ 



Rate this content
Log in

Similar kannada poem from Drama