ಹಕ್ಕಿ ಹಾರಿತು
ಹಕ್ಕಿ ಹಾರಿತು
ಹಕ್ಕಿಯು ಹಾರಿತು
ಮೇಲಕೆ ಹಾರಿತು
ಬಾನಂಗಳಕೇರಿತು
ಸ್ವಾತಂತ್ರ್ಯ ರೆಕ್ಕೆಯ
ಪಟ ಪಟ ಬಡಿಯುತ
ಮೋಡದ ಮರೆಯಲಿ
ನಲಿಯುತ ಸಾಗಿತು
ನೋಡಿತು ಕೆಳಗೆ
ಪಂಜರದ ಹಕ್ಕಿಯ
ಕೂಗಿ ಕರೆಯಿತು
ತನ್ನಯ ಎಡೆಗೆ
ಬಂಧನ ಕಳಚಿ
ಸ್ವತಂತ್ರವಾಗಿರಿ
ಬನ್ನಿರಿ ಮೇಲಕೆ
ಎನ್ನುತ ಸಾರಿತು
