STORYMIRROR

ಯಜ್ಞಸೇನಿ ಶ್ರೀಹರಿ

Drama Romance Tragedy

2  

ಯಜ್ಞಸೇನಿ ಶ್ರೀಹರಿ

Drama Romance Tragedy

ಹೋಗಿ ಬಿಡು ಗೆಳೆಯಾ.....

ಹೋಗಿ ಬಿಡು ಗೆಳೆಯಾ.....

1 min
137

ಮೌನದ ಮಾತು ಮೌನವಾಗಿ ಮಾತನಾಡಿದೆ...

ಹೇಳದ ಪದಗಳು ಸ್ಮಶಾನದ ದಾರಿ ಹಿಡಿದಿದೆ...

ಮುಚ್ಚಿಟ್ಟ ಆ ಭಾವನೆಗಳು ಉತ್ತುಂಗದ ಶೀಖರವೇರಿದೆ....


ನಿನ್ನ ಮೇಲೆ ಕಾಣದ ಭಾವ ಕಂಡು ಮರೆಮಾಚಿದೆ....

ನೀ ಒಂದು ವರ್ಣಿಸಲಾಗದ ಹಿತಕರವಾದ ನನ್ನ ಭಾವನೇ...

ನಾ ಕಂಡ ಭಾವನೆಗಳಿಗೆ ನೀನೇ ಅರ್ಥವಲ್ಲವೇ....


ಮುಚ್ಚಿಟ್ಟು ಪ್ರೀತಿಯ ಆರಾಧನೆ ಮಾಡಲಾರೆ...

ಹೇಳಿಬಿಟ್ಟು ಸ್ನೇಹಕ್ಕೆ ಅಪನಂಬಿಕೆ ಪಟ್ಟಿ ಕೊಡಲಾರೆ...

ನೀ ಕಟ್ಟಿದ ಆ ಕನಸುಗಳು ಮಿತಿ ಮೀರಿ ಗಡಿದಾಟಿದೆ....

ಆದರೆ ನಿನ್ನ ನನಸಿಗೆ ಇಟ್ಟಿದ್ದ ಹೆಸರು ಮಾತ್ರ ನಾ ಆಗಿದ್ದೆ...


ಹೋಗಿ ಬಿಡು ಗೆಳಯಾ....

ಜಗತ್ತಿನ ಖುಷಿ ನಿನಗೆ ಸಿಗಲಿ.....

ಮತ್ತೆ ಬರದಿರು ನನ್ನ ಪುಟ್ಟ ಜಗತ್ತಿಗೆ ....


ತಂಗಾಳಿಯ ಹಾಗೇ ಹಾರಾಡುವ ನನಗೆ ನಿನ್ನ ಬಂಧನ ಬೇಕಾಗಿಲ್ಲ...

ನನ್ನ ಕನಸಿನ ಗೋಪುರ ಬೀಳಿಸಿದ ನಿನಗೆ ನನ್ನ ಭಾವನೆಯ ಬಗ್ಗೆ ಮಾತನಾಡುವ ಅರ್ಹತೆ ಕೂಡ ಇಲ್ಲ ...


ನಿನ್ನ ಎರೆಡರಷ್ಟು ಜಗತ್ತಿನ ಖುಷಿ ನನ್ನ ಪ್ರಪಂಚದಲ್ಲಿದೆ...

ಏನೇ ಬರಲಿ, ನನ್ನ ಬೆನ್ನಿಗೆ ನಾನೇ ಇದ್ದಿನೇ..

ನನ್ನ ಆತ್ಮವಿಶ್ವಾಸವೇ ನನ್ನೊಲವು...

ನೀ ಕಲಿಸಿದ ಪಾಠವೇ ನನಗೆ ಗುರು....


ಧನ್ಯವಾದಗಳು ಗೆಳೆಯಾ...

ಮನಸ್ಸಿನ ಬಾಗಿಲ ಮುಚ್ಚಿ ....

ನನ್ನ ಆತ್ಮದ ಬಾಗಿಲನ್ನು ತೆಗೆದಿದ್ದಕ್ಕೆ...


ಹೋಗಿ ಬಿಡು ಗೆಳೆಯಾ....

ಮತ್ತೆ ಬಾರದಿರು....


Rate this content
Log in

Similar kannada poem from Drama