STORYMIRROR

ಯಜ್ಞಸೇನಿ ಶ್ರೀಹರಿ

Romance Others

2  

ಯಜ್ಞಸೇನಿ ಶ್ರೀಹರಿ

Romance Others

ಪ್ರೀತಿಯ ಸ್ಮಶಾನ....!!!

ಪ್ರೀತಿಯ ಸ್ಮಶಾನ....!!!

1 min
91

ಮನದಲ್ಲಿ ಹುಟ್ಟಿದ ಕನಸುಗಳಿಗೆ ನಾವಿಕ ನೀ...

ಆದರೆ ನನಸಾಗುವ ಮುನ್ನವೇ ಚಿವುಟಿದೆ ನೀ...

ಕರೆಯದೆ ಬಂದೆ ನೀ ಮನದ ಮನೆಗೆ...

ಹೇಳದೇ ಯಾಕೆ ಬಿಟ್ಟು ಹೋದೆ...


ಮತ್ತೆ ಬಂದು ಹಗಲು ಕನಸಿನ ರೂವಾರಿ ಆಗಬೇಡಾ..

ಮನಸ್ಸಿನ ಯುದ್ದದ ಸೇನಾನಿ ಆಗಬೇಡಾ...

ನನ್ನ ಜೀವನದ ಕೊನೆಯ ಅಧ್ಯಾಯ ನೀ ಆಗಬೇಡಾ..

ಮತ್ತೆ ಕಂಗಳ ಕನಸಿನ ಸೇತುವೆ ನೀ ಆಗಬೇಡಾ...


ಸಾಗುವ ದಾರಿಯ ಗಮ್ಯ ದೊರೆತಿದೆ ...

ನಿನ್ನ ಪ್ರೀತಿ ಸ್ಮಶಾನ ಸೇರಿದೆ...

ನಗುವು ಮುಖದಲ್ಲಿ ಮತ್ತೆ ದೊರೆತಿದೆ..

ಅಳುವು ಸೂಜಿ ಅಂತರದಲ್ಲಿ ದೂರವಾಗಿದೆ...


ನಿನ್ನ ನೆನೆದು ಮನ ಮುದುಡಿಲ್ಲಾ...

ನನ್ನ ಕಣ್ಣಿರು ಇನ್ನೂ ಬತ್ತಿಲ್ಲಾ....

ದೋಣಿಯು ನೀರಿನ ಸೆಳೆತದ ದಾರಿಯನ್ನು ಸೇರಿದೆ...

ನನ್ನ ಭಾವಲಹರಿಯು ನನ್ನತನದತ್ತ ಸೆಳೆದಿದೆ...


ಜೀವನದ ದೋಣಿಯ ಹುಟ್ಟನ್ನು ಹಾಕುತ್ತಿದ್ದೆನೆ...

ನನ್ನಗೊಸ್ಕರ ಮಾತ್ರ ಜೀವಿಸುತ್ತಿದ್ದೆನೆ...

ಮೌನ ಮುರಿದು ಹಕ್ಕಿಯಾಗಿ ಹಾರಾಡುತ್ತಿದ್ದೆನೆ...

ನನ್ನ ಬದುಕಿಗೆ ಮತ್ತೆ ಬರದಿರು ಗೆಳೆಯಾ , ನಾ ಖುಷಿಯಾಗಿದ್ದೆನೆ.....


Rate this content
Log in

Similar kannada poem from Romance