ಫ್ಯಾಂಟಸಿ
ಫ್ಯಾಂಟಸಿ
ನಾನು ಕಂಡೆನೊಂದು
ಫ್ಯಾಂಟಸಿ ಲೋಕ;
ಅಲ್ಲಿ ಎಲ್ಲವೂ ಇದೆ
ಆದರೆ ಯಾವುದು ಇಲ್ಲ;
ಮಾತುಕತೆಗಳಿಲ್ಲ,ಭಾವನೆಗಳಿಲ್ಲ,
ಹಂಚಿಕೊಳ್ಳಲು ಮನುಷ್ಯರಿಲ್ಲ
ಇದ್ದರೂ ಅವರದ್ದು ಫ್ಯಾಂಟಸಿ ಲೋಕ;
ಅಲ್ಲಿ ನಡೆಯುವುದು
ಕಣ್ಣಿಗೆ ಕಾಣಲ್ಲ, ಕಂಡರು
ಕಾಣದಂತೆ ಇರುವರು ಎಲ್ಲ,
ಕಾರಣ ಅದು ಫ್ಯಾಂಟಸಿ ಎಂಬ ಭ್ರಮಾಲೋಕ;
ಅವರಿಗೆ ಇವರು ಗೊತ್ತಿಲ್ಲ
ಇವರಿಗೆ ಅವರು ಗೊತ್ತಿಲ್ಲ
ಗೊತ್ತಿದ್ದರು ತೋರುವುದಿಲ್ಲ
ಕಾರಣ ಅವರು ಫ್ಯಾಂಟಸಿ ಲೋಕದಲ್ಲಿ ವಿಹರಿಸುವರೆಲ್ಲಾ
