ನನ್ನ ಮನಕ್ಕೂ, ಸುತ್ತಲಿರುವ ಜನಕ್ಕೂ
ನನ್ನ ಮನಕ್ಕೂ, ಸುತ್ತಲಿರುವ ಜನಕ್ಕೂ
ಎಲ್ಲವೂ ನನ್ನದಲ್ಲ ಎಂಬ ಭಾವ
ಎಲ್ಲರೂ ಅಪರಿಚಿತರೆಂಬ ಭಾವ
ಹಳಬರು ಹೊಸಬರೆನ್ನುವ ಭಾವ
ಹಾಲಲ್ಲೂ ನೀರನು ಹುಡುಕುವ ಭಾವ
ನಂಬಿಕೆಯನ್ನು ನಂಬದ ನೀಚ ಭಾವ
ಪ್ರೀತಿಯಲ್ಲೂ ಸಾರ್ಥವ ಅರಸುವ ಭಾವ
ಹೀಗೀಕೆ? ಮೊದಲೆಲ್ಲ ಹೀಗಿರಲಿಲ್ಲ ನಾನು
ಅಪರಿಚಿತರನ್ನು ಮಾತಿನ ಮೋಡಿಗೆ
ಮರುಳು ಮಾಡುತ್ತಿದ್ದೆ
ನಿನ್ನೆ ಇಂದು ಸಿಕ್ಕವರೊಂದಿಗೂ
ಜನ್ಮ ಜನ್ಮದ ಸ್ನೇಹಿತರಂತೆ ವರ್ತಿಸುತ್ತಿದ್ದೆ
ಎಲ್ಲರನ್ನೂ ಕುರುಡಾಗಿ ನಂಬುತ್ತಿದ್ದೆ
ಬೆಳ್ಳಗಿರುವುದೆಲ್ಲ ಹಾಲೇ ಎಂಬ ಭಾವ ನನದು
ನಿಸಾರ್ಥ ಎನ್ನುವುದೇ ಪ್ರೀತಿಯ ಬೇರು
ಎಂದುಕೊಂಡಿತ್ತು ನನ್ನ ಮನಸ್ಸು!
ಎಲ್ಲದಕ್ಕೂ ಗ್ರಹಣ ಹಿಡಿಯಿತು
ನನ್ನ ನಂಬಿಕೆಗಳೆಲ್ಲ ಸುಳ್ಳೆಂದು
ನಿರೂಪಿತವಾಯಿತು!
ಭಾವನೆಗಳಿಗೂ, ವಾಸ್ತವ ಬದುಕಿಗೂ
ಬಾನು ಭೂಮಿಯ ವ್ಯತ್ಯಾಸವಿದೆ
ಎನ್ನುವುದೀಗ ಅರಿವಾಗಿದೆ!
ನನ್ನ ಮನಕ್ಕೂ, ಸುತ್ತಲಿರುವ ಜನಕ್ಕೂ
ಬಾನು ಭೂಮಿಯಷ್ಟು ವ್ಯತ್ಯಾಸವಿದೆ!
