ಆಟ
ಆಟ
ದುಗುಡ ಕಳೆಯುವರು
ವ್ಯಾಯಾಮ ಪಡೆಯುವರು
ಉಲ್ಲಾಸ ತುಂಬುವರು
ಆಟದಿಂದ॥
ಹುಟ್ಟಿನಿಂದ ಬದುಕಿನ ಕೊನೆವರೆಗೆ
ಆಟ ಸಾಗುತ್ತಲೇ ಇರುವುದು
ವಯಸ್ಸಿನ ತೊಡಕಿಲ್ಲ, ಕಾಲದ ಹಂಗಿಲ್ಲ
ಪ್ರತಿಕ್ಷಣವು ಸಾಗುತಲೆ ಇರುವುದು॥
ಆಟದ ಜೊತೆಗೆ ನೀತಿಯ ಬಳಸಿ
ಬದುಕನು ಸಾಗಿಸುತಿರಬೇಕು
ಮೋಡದ ಮರೆಯ ಚಂದಿರನಂತೆ
ಕಷ್ಟಕೆ ಕೊರಗದೆ ನಗುತಿರಬೇಕು ॥
ತನ್ನಯ ಬದುಕನು ಬಿಟ್ಟು
ಇತರರ ಬದುಕನು ಕೆಡಿಸುವ
ಆಟವನೆಂದಿಗೂ ಆಡದಿರು
ನೋವನು ಎಂದಿಗೂ ನೀಡದಿರು॥
