ಮಾತು
ಮಾತು
ಮಾತು ಇರಬೇಕು ಮಿತವಾಗಿ
ಯಾರ ನೋಯಿಸದಂತೆ ಹಿತವಾಗಿ
ಯಾರ ನೋವು ಏನೆಂದು
ಅರಿತವರು ಯಾರು
ಅರ್ಥವೇ ಆಗದ ವಿಷಯದ
ಬಗೆಗೆ ಅನಗತ್ಯ ಮಾತು ಬೇಕೇನು
ಒಂದು ಸಾಂತ್ವನದ ನುಡಿಯು
ಮತ್ತಾರದೋ ನೋವ ನೀಗಿದರೆ
ಮಾತು ಸಾರ್ಥಕವಲ್ಲವೇನು
ಒಂಟಿಯಾಗದಿರಲಿ ನೊಂದ ಜೀವಗಳು
ಮಿಥ್ಯಗಳಿಗೆ ಮಿತಿಯಿರಲಿ
ತತ್ವಗಳ ಅಳವಡಿಕೆಯಿರಲಿ
ಮಾತು ಕಡಿಮೆಯಿದ್ದರೂ
ವಿವೇಚನೆಯಿಂದ ಪದಗಳು ಹೊರಳಲಿ
