ಪಯಣ
ಪಯಣ
ಸಾಗರಲೆಗಳ ಭೋರ್ಗರೆವ ಸದ್ದು
ಪೃಕೃತಿಯ ಮಡಿಲಲಿ ನೀರವ ಮೌನ
ಭಂಗತರಿಸಿತ್ತು ಹಕ್ಕಿಗಳ ಕಲರವ
ಅತ್ತಿತ್ತ ಹೊರಳುವ ರೆಂಬೆಕೊಂಬೆಗಳ ಗಾನ
ಇಳಿಸಂಜೆಯು ಆವರಿಸುತ್ತಲೇ ಚಂದಿರನ ಆಗಮನ
ಚುಕ್ಕಿ ತಾರೆಗಳಿಗೆ ಮಿನುಗುವ ಸಂಭ್ರಮ
ದಿನದ ಪಯಣ ಮುಗಿಸಿ ರವಿಯ ನಿರ್ಗಮನ
ದಣಿದ ಜೀವಗಳಿಗೆ ವಿಶ್ರಾಂತಿಯ ಸಮಯ
ಸುತ್ತಲೂ ಕತ್ತಲಾವರಿಸಿ ತರುಣಿಯೆದೆಯಲಿ ದಿಗಿಲು
ಚುಕ್ಕಿತಾರೆಗಳ ಚಿತ್ತಾರದಿ ಕಂಗೊಳಿಸಿದರೂ ಮುಗಿಲು
ನೊಂದರೂ ಬೆಂದರೂ ಪೃಕೃತಿಯದಿಲ್ಲ ದೂರು
ನಿತ್ಯದ ಪಯಣದಲ್ಲಿ ಇದೆಲ್ಲಾ ಮಾಮೂಲು
