ಶಿಶು ಗೀತೆ
ಶಿಶು ಗೀತೆ
1 min
13
ನಮ್ಮನೆಯ ಯುವರಾಜ ಸೋನು
ಅವನಿಗೆ ಬಲುಪ್ರಿಯವು ಮೀನು
ಬೊಗಸೆಯಷ್ಟು ನೀರಿದ್ದರೂ ಸಾಕು
ಅಲ್ಲವನಿಗೆ ಮೀನು ಕಾಣಲೇ ಬೇಕು
ಸಿಕ್ಕಿತೆಂದರೆ ಪುಟ್ಟ ಮೀನಿನ ಮರಿ
ಕುಣಿದು ಕುಪ್ಪಳಿಸುವ ಅವನ ಪರಿ
ಕೈಜಾರಿದರೆ ಸಮಾಧಾನ ಬಲುಕಷ್ಟ
ನೀರು ಮಣ್ಣೆಂದರೆ ಕಂದನಿಗೆ ಇಷ್ಟ
ಚೆಂದದ ಬಟ್ಟೆಗಳು ಹಿಡಿಸದವನಿಗೆ
ಕೆಸರುಗದ್ದೆ ಪ್ರಿಯ ಮಣ್ಣಿನ ಮಗನಿಗೆ
ಮುಂಗಾರಿನ ಮಳೆಯಲ್ಲಿ ಕಾಡುವ ಶೀತ
ಪುಟ್ಟ ಮಕ್ಕಳಿಗೆಲ್ಲಾ ಸೋನು ಚಿರಪರಿಚಿತ
ಸಂಗಡಿಗರ ಜೊತೆಗೆ ಹೊರಟರೆ
ಭಯವಿಲ್ಲದೆ ಏರುವ ಶಿಖರದೆತ್ತರಕ್ಕೆ
ಮನೆಯ ನೆನಪಾಗುವುದೇ ಕಂದನಿಗೆ
ಒಂದೊಮ್ಮೆ ಹಸಿವು ಆಯಾಸವಾದಾಗಲೇ
