STORYMIRROR

AMMU RATHAN SHETY

Classics Inspirational Others

4  

AMMU RATHAN SHETY

Classics Inspirational Others

ಸಂಗಮ

ಸಂಗಮ

1 min
15


ನದಿಗಳೆರಡು ಒಂದಾಗಿ 

ನಿಸರ್ಗದ ಸಂಗಮ

ಜೀವಗಳೆರಡು ಬೆಸೆದು

ಪ್ರೀತಿಯ ಸಂಗಮ ‌


ಎಲ್ಲೋ ಹುಟ್ಟಿ ಬೆಳೆದ ನದಿ 

ನೀರಿನಾಸರೆಯಲಿ ಪೃಕೃತಿ

ಬದುಕಿಗೆ ಜೊತೆಯಾಗಿ ‌ಸಂಗಾತಿ 

ಅವಲಂಬಿತ ಸಕಲ ಸೃಷ್ಟಿ


ಮಳೆಯಿರದೆ ಇಳೆಯಿಹುದೇ 

ಅಂಬರ-ಭುವಿಯ ಸಂಗಮವಿದು 

ಪೃಕೃತಿಯ ಮಿಲನದಲೇ ಸಂತೃಪ್ತಿ

ಸಕಲ ಜೀವಿಗೂ ಭುವಿಯಲಿ 


ಕತ್ತಲಾವರಿಸುತಲೇ ಬರುವ ಚಂದಿರನು 

ಸುತ್ತಲು ಆವರಿಸಿದ ಚುಕ್ಕಿ ತಾರೆಯರು

ಆ ನೀಲಾಕಾಶದಿ ಬೆಳಕಿನ ಸಂಭ್ರಮ

ಕಡಲಲೆಗಳಿಗೂ ಆಗಸಕೂ ಸಂಗಮ 


Rate this content
Log in

Similar kannada poem from Classics