ತಂಗಾಳಿ
ತಂಗಾಳಿ
ಮುಸ್ಸಂಜೆಯ ಹೊತ್ತಿಗೆ ಭುವಿಗೆ
ತಂಗಾಳಿಯ ಅಪ್ಪುಗೆಯಂತೆ
ಮೌನಿಯಾಗಿದ್ದ ನನ್ನೊಳಗೆ
ನೀ ಮಂದಹಾಸ ಬೀರಿದೆ
ಅರ್ಧ ಚಂದ್ರ ಬಾನಲಿ ಗೋಚರಿಸಿದ
ಮೋಡಗಳ ನಡುವೆ ಅವಿತು
ಆಷಾಡದ ತಣ್ಣನೆಯ ಗಾಳಿಗೆ
ಶಶಿಗೂ ಬೆಚ್ಚನೆ ಬೇಕಿದೆ
ಹಗಲೇನು ಇರುಳೇನು ತರುಣಿಗೆ
ಆಸೆಗಳು ಚಿಗುರಿದ ವಯಸಲಿ
ಕೊರೆವ ಚಳಿಯೂ ಹಿತವು
ನೆನಪುಗಳೇ ಬೆಚ್ಚನೆ ಅನುಭವವು
ಸಂಜೆಗಳೆಂದರೆ ಬೇಸರ ವೃದ್ದೆಗೆ
ತಂಗಾಳಿಯು ಅವಳಿಗೆ ಹಿಡಿಸಬಹುದೇ
ಸುಕ್ಕಾದ ದೇಹಕೆ ಸಹಿಸಲಾಗುವುದೇ
ಈ ಸಂಜೆಯ ಕೊರೆವ ಚಳಿಯ ಭಾಧೆ
