ಮಂತ್ರ ಮಾಂಗಲ್ಯ
ಮಂತ್ರ ಮಾಂಗಲ್ಯ
ಮಂತ್ರಘೋಷಗಳ ಸದ್ದಿರದೆ
ವಾದ್ಯ ಮೇಳಗಳ ಗದ್ದಲವಿಲ್ಲದೆ
ಜೀವಗಳೆರಡನು ಬೆಸೆವ ಮಂತ್ರ ಮಾಂಗಲ್ಯ
ಪರಿಕಲ್ಪನೆ ಕುವೆಂಪುರವರ ಕೊಡುಗೆ
ಸರಳ ವಿವಾಹದ ನೂತನ ಪ್ರಯೋಗವು
ಇಲ್ಲಿಲ್ಲ ಲೆಕ್ಕಮೀರಿದ ಆಮಂತ್ರಣವು
ವಧುವಿನ ಹೆತ್ತವರಿಗಿಲ್ಲ ಭರಿಸಲಾರದ ವೆಚ್ಚವು
ವರನಿಗಿಲ್ಲ ವರದಕ್ಷಿಣೆಯ ಅಪೇಕ್ಷೆಯು
ಮಧ್ಯವರ್ತಿಗಳು ಹಣದ ಪೀಡೀಸುವಂತಿಲ್ಲ
ಉಡುಗೊರೆಯ ಮಂಟಪದಿ ಕೊಡುವ ಪದ್ದತಿಯಲ್ಲ
ಹೆತ್ತವರ ಸಮಕ್ಷಮದಿ ಕಾಲಗಳ ಪರಿಮಿತಿಯಿರದೆ
ಮಾಂಗಲ್ಯಧಾರಣೆ , ಅದೆಷ್ಟು ಚೆಂದದ ಯೋಚನೆ
