ರಾಮ
ರಾಮ
ಇನ್ನಷ್ಟು ಬೇಕೆನ್ನ ಹೃದಯಕೆ ರಾಮ
ಅನುದಿನವೂ ಭಜಿಸುವ ರಾಮ
ನಾಮ ಸಂಕಷ್ಟ ಪರಿಹಾರಕ್ಕೆ ದಾರಿಯ ತೋರು
ಸನ್ಮಾರ್ಗದಲ್ಲಿ ಸಾಗಲು ನೀನಾಗು ಗುರು !!
ಸ್ವಯಂವರದಿ ಶಿವಧನಸ್ಸು ಎತ್ತಿದ ಶೂರ
ಜನಕ ಪುತ್ರಿಯ ವರಿಸಿದ ರಾಜಕುಮಾರ
ನಿನ್ನಂತಹ ಪರಾಕ್ರಮಿ ಇರಬಹುದೇ ಜಗದಿ
ರಾಮನಾಮ ಜಪವಿರಲು ಅದೇನೋ ನೆಮ್ಮದಿ !! ೧!!
ವಾಲ್ಮೀಕಿ ರಚಿತ ರಾಮಾಯಣ ಗ್ರಂಥವು
ರಾಮನೆಂಬುದೇ ಭರವಸೆ, ಎದುರಾದಾಗ ನೋವು
ಅಗಸನ ಮಾತು ನೋಯಿಸಿತೇಕೆ
ಶ್ರೀರಾಮಸೀತೆಯಿರದೇ ಪರಿಪರಿಯಾಗಿ ನೊಂದೆಯಾ ರಾಮ !!೨!!
ದಶರಥ ಪುತ್ರ ಅಯೋಧ್ಯೆಯ ರಾಜಕುಮಾರಕೌಸಲ್ಯಾ,
ಸುಮಿತ್ರೆ, ಕೈಕೇಯಿ ಮಾತೆಯರಮಮತೆಯ ಮಡಿಲು
ನೀನಲ್ಲವೇ ರಘುರಾಮಸ್ಮರಣೆಯ ಮಾಡುತ್ತಾ ನಿನಗೆನ್ನ ಪ್ರಣಾಮ! !೩!!
ತಂದೆಗೆ ನೀಡಿದ ವಚನಕ್ಕೆ ಬೆಲೆಕೊಟ್ಟು
ಹೊರಟೆಯಲ್ಲವೇ ಅರಮನೆಯ ಸುಖವ ಬಿಟ್ಟು
ಜನುಮಗಳ ಪಾಪವು ಹೊರೆಯಾಗಿ ಇರಲು
ದ್ವಂದ್ವಗಳ ನಡುವೆ ಸನ್ಮಾರ್ಗದ ಹಾದಿತೋರಲು !!೪!!
