STORYMIRROR

Lakumikanda Mukunda

Abstract Action Inspirational

4  

Lakumikanda Mukunda

Abstract Action Inspirational

ಗಜಲ್

ಗಜಲ್

1 min
222


ಅತಿಯಾದ ನಂಬಿಕೆಯೇ ಆಘಾತ.! ತಂದಿತ್ತು ಸಾಕಿ..

ಮಿತಿಯಿಲ್ಲದ ಸುಳ್ಳು ಜಗದಿ ತಾನೆಂದು ಮೆರೆದಿತ್ತು ಸಾಕಿ..


ಹಣದ ವ್ಯಾಮೋಹಕ್ಕೆ ಸಿಕ್ಕಿ ಮನಸು ಹೆಣವಾಗಿತ್ತು ..

ಚಿಗುರೊಡೆದ ಕನಸು ಆಗಾಗ ಕಮರಿತ್ತು ಸಾಕಿ..


ಸತ್ಯದ ಕತ್ತು ಹಿಚುಕಿ ನಿತ್ಯ ಗಹಗಹಿಸಿ ನಕ್ಕವರಿಹರು..

ಅಹಂಕಾರದ ದೊಡ್ಡಸ್ತಿಕೆಗೆ ಕಾರ್ಮೋಡ ಕವಿದಿತ್ತು ಸಾಕಿ..


ವಿಧಿಯ ಹಳಿದ ಹಾದಿಗುಂಟ ಉರಿವ ಬೆಂಕಿ ಉಳಿದಿತ್ತು..

ಸಿಹಿಸ್ವಪ್ನ ಬೆಳಕಿನ ಹಿಲಾಲು ಹಿಡಿದು ಮುಂದೆ ಸಾಗಿತ್ತು ಸಾಕಿ..


ಸವಿಸುಂದರ ನಾಳೆಗಾಗಿ ದೈವವ ಪ್ರಾರ್ಥಿಸಲು ಲಕುಮಿಕಂದ..

ಅವರವರ ಕರ್ಮಾನುಸಾರ ಬದುಕು ಅನವರತ ಸಾಗಿತ್ತು ಸಾಕಿ..


Rate this content
Log in

Similar kannada poem from Abstract