STORYMIRROR

Prabhakar Tamragouri

Action Classics Inspirational

4  

Prabhakar Tamragouri

Action Classics Inspirational

ಅಂಗಳದ ತುಂಬಾ ಪಾರಿಜಾತ

ಅಂಗಳದ ತುಂಬಾ ಪಾರಿಜಾತ

1 min
650


ಮಂಜು ಮುಸುಕಿದ ಮುಂಜಾವಿನಲಿ 

ಅಂಗಳದ ತುಂಬೆಲ್ಲಾ ಬಿದ್ದ 

ಪಾರಿಜಾತದ ಹೂವಿನ ಮೇಲೆ

ಬಿದ್ದ ಮುತ್ತಿನಂತೆ ಹೊಳೆಯುವ 

ಮಂಜು ಹನಿ


ಮೂಢಣದಲ್ಲಿ ಉದಯಿಸುವ 

ಸೂರ್ಯನ ಬೆಳಕಿನ ಕಿರಣಕೆ 

ಹೊಳೆಯುವ ಬಣ್ಣ ಬಣ್ಣದ ಚಿತ್ತಾರ 

ಅಷ್ಟಷ್ಟೇ ಕರಗಿ 

ನೀರಾಗಿ ಹರಿದು

ಅಂಗಳದ ತುಂಬಾ ರಾಡಿ ರಾಡಿ..


ಹೂ ಹೆಕ್ಕಬೇಕೆಂದರೆ

ಅಂಗಳದ ತುಂಬಾ ಹಾರಿ

ಹರಡಿದ ಹೂವ ಹೆಕ್ಕಬೇಕೆಂದುಕೊಂಡಾಗಲೇ

ಅನರೀಕ್ಷಿತವಾಗಿ ಬಂದ ಗಾಳಿ

ರಭಸಕ್ಕೆ ದಿಕ್ಕುಪಾಲು

ಅಲ್ಲಲ್ಲಿ ಅಂಟಿಕೊಂಡ 

ಒಂದೆರಡು ಹೂವು ಅಷ್ಟೇ ! 



Rate this content
Log in

Similar kannada poem from Action