STORYMIRROR

Gireesh pm Giree

Action Inspirational Others

4  

Gireesh pm Giree

Action Inspirational Others

ಪ್ರೇಮ

ಪ್ರೇಮ

1 min
331


ನನ್ನ ನಾನೇ ಮರೆತೆ ನಿನ್ನ ಪ್ರೇಮದಿ ಬೆರೆತೆ

ನನ್ನ ಪ್ರೀತಿಯ ನೀ ಅರಿತೆ ಹಚ್ಚಿದೆ ಪ್ರೇಮ ಹಣತೆ

ಚೆಲುವೆಯ ಚೆಲುವಿನ ನೋಟಕ್ಕೆ ನನ್ನೊಳಗೆ ತೆರೆಯಿತು ಹೊಸದೊಂದು ಪ್ರೇಮ ಖಾತೆ

ನನ್ನಾಕೆ ನಿನ್ನ ನೋಡಿದ ಮೊದಲ ದಿನದಿಂದ ನಾ ಸೋತೆ


ಚಿಗುರಲು ಹೊಸಹೊಸ ಭಾವನೆಗಳು ಹೃದಯದ ಆಲಯದಲ್ಲಿ

ಪ್ರೀತಿ ತಂಗಾಳಿಯು ಬೀಸಲು ಧಮನಿಯ ನಿಲಯದಲ್ಲಿ

ಬರುವೆ ಮನದಾಗ ಕನಸಲ್ಲಿ ನೀ ಮನದಲ್ಲಿ

ಇರುವೆ ನೀ ತನುವಿನ ಕಣಕಣದ ಉಸಿರಲ್ಲಿ



ಪ್ರೇಮ ಕವಿತೆಯ ಉದಯವಾಯಿತು ನಿನ್ನ ನೋಡಿ ತರುಣಿ

ಆದೆ ಈ ಪುಟ್ಟ ಹೃದಯ ಸಿಂಹಾಸನದಲ್ಲಿ ಯುವರಾಣಿ

ಕದ್ದೆ ಮನವ ಗೆದ್ದೆ ಜೀವನದ ಪೂರ್ತಿ ಸರಣಿ

ನನ್ನೊಳಗೆ ನಾ ಅರಿಯದೆ ಪ್ರೇಮ ಕಡಲಲ್ಲಿ ಸಾಗಿತು ಪ್ರೇಮ ದೋಣಿ


ನನ್ನ ಎದೆಯ ಕಿಟಕಿಯಲ್ಲಿ ಹೊಳೆಯೋ ಕನ್ನಡಿ ನೀನು

ನೋಡುವ ನಯನಗಳಿಗೆ ದೃಷ್ಟಿಯಂತೆ ನಿನಗೆ ನಾನು

ವಿಶಾಲವಾಗಿದೆ ಸುಂದರ ಅಂಬರದ ಬಾನು

ನಾವಿಬ್ಬರು ಜೋಡಿ ಹಕ್ಕಿಗಳಂತೆ ಹಾರೋಣವೇನು?


ನಿನ್ನ ಮೊಗದ ಚಂದಕ್ಕೆ ಮಾರು ಹೋಗಿಲ್ಲ ಮರುಳೆ

ನಿನ್ನ ಮನದ ಅಂದಕ್ಕೆ ಮರುಳಾದೆ ಚೆಲುವೆ

ಈ ಮೊಗದ ಚಂದವು

ಒಪ್ಪಿಕೊ ನನ್ನ ಪ್ರೇಮವ ಅಪ್ಪಿಕೋ ನನ್ನ ಪ್ರೀತಿಯ ನೀನು

ನಿನಗಾಗಿ ಕಾದಿರುವೆ ಉಸಿರ ಕೊನೆ ತನಕ ನಾನು



Rate this content
Log in

Similar kannada poem from Action