ಸವತಿಯೊಡನೆ ಸಲ್ಲಾಪ
ಸವತಿಯೊಡನೆ ಸಲ್ಲಾಪ
ಸಂಗದೋಷವೊಂದೇ ಕಾರಣವಲ್ಲ
ನೀ ಹದಗೆಡಲು.
ಹಲವು ಸಂಗತಿಗಳಿಗೆ ಮೂಲವಾದವಳು
ಮನೆಯಲ್ಲೇ ಮಲಗಿಹಳು.
ಅಂಗಧೋರಣೆಯೇ ಕಾರಣವಲ್ಲ
ನೀ ನಿರ್ಲಜ್ಜನಾಗಲು.
ಇಂಗಲಾರದ ದಾಹ ನಿನ್ನೊಳಿರಲು,
ಸವತಿಯ ನೆಪವಷ್ಟೇ..
ನಂಬಿ ಬಂದವಳ ಕೈ ಬಿಟ್ಟೆಯಲ್ಲಾ
ನಿನಗೆ ನಿಯತ್ತೇ ಇಲ್ಲವೇ?
ದುಂಬಿ ಹೂವಿಂದ ಹೂವಿಗೆ ಹಾರುವಂತೆ,
ಮೂಸಿ ನಾಶವಾದೆ ನೀನೆ.
ಆಮಿಷಕೆ ಮೈಯೊಡ್ಡಿ, ರಸನಿಮಿಷ ಸುಖಿಸಿ,
ಜನ್ಮದಾತರ ಮನ ನೋಯಿಸಿದೆ.
ಅಂಡಲೆಯುತ ಸಮಯ ವ್ಯಯಿಸಿದೆ
ತುಚ್ಛ ಜೀವನ ನಿನ್ನದು..
