STORYMIRROR

JAISHREE HALLUR

Tragedy Action Others

5  

JAISHREE HALLUR

Tragedy Action Others

ವೇಶ್ಯೆಯರು.....

ವೇಶ್ಯೆಯರು.....

1 min
443


ಬಟ್ಟ ಬಯಲ ಇರುಳು ನಿಮ್ಮ ಜಗತ್ತು

ದಿಟ್ಟ ಹೆಜ್ಜೆಗಳ ಕಾದಾಟದ ಸವಲತ್ತು.


ಬೆಂಗಳೂರಿನ ಕರೀ ಡಾಂಬರು

ತುಂಬಿದ ಓರೆಕೋರೆಗಳ ರಸ್ತೆಗಳು

ದಿಬ್ಬ ದಿಣ್ಣೆಗಳ ಆಗರ , ಮೋರಿಮುಚ್ಚಿ

ಹೊರಚೆಲ್ಲಾಡುವ ತಿರುವುಗಳು...


ಬರುವವರು ಹೋಗುವವರು

ಕಾಲ್ನಡಿಗೆಯಲ್ಲಿ ,  ಗಾಡಿಗಳಲ್ಲಿ..‌‌‌‌.‌‌


ಅಗೆವರು ನಿಮ್ಮನ್ನು ಕೇಬಲ್ಲಿಗೊಮ್ಮೆ

ಕೊಳಚೆ ಮೋರಿಗೊಮ್ಮೆ ...‌‌‌

ಅಗೆತಗಳ ಮರುಮುಚ್ಚದೆ

ಕೆಚ್ಚೆದೆಯಲಿ ಬೀಗುವವು ಬಿಡಿಎ

ಬಿಡಬ್ಲ್ಯೂಎಸ್ಎಸ್ಬೀಗಳು


ನಲುಗಿ ನುಜ್ಜಾದ ಸವೆತಗಳ ನೋವಿಗೆ

ಖಾಳಜಿಯ ಮಾತಿಲ್ಲ

ಕಳಕಳಿಯ ತೋರಿ ಮುಲಾಮು ತೀಡಿ

ಮಮಕಾರ ತೋರಲಿಲ್ಲ.


ವರುಷಕೊಮ್ಮೆ ಮೋಧಿ ಬರುವ ದಿನ

ಪೊರಕೆ ತೋರುವ ಸ್ವಚ್ಛ ಭಾರತ

ಮತ್ತೊಮ್ಮೆ ಚುನಾವಣೆಯಲಿ ಮೆರೆವ

ಬಿತ್ತಿ ಪತ್ರಗಳು ಅಲಂಕೃತ ಗೋಡೆಸಹಿತ


ಹಾದಿಬದಿಯ ಬೇಲಿಯಲೆಲ್ಲ ಎಂಜಲು,

ಮಲಮೂತ್ರ ಗಳದೇ ದುರ್ಗಂಧ

ಹೋದಲ್ಲಿ ನಿಂತಲ್ಲಿ ಮೂತ್ರವಿಸರ್ಜಿಸುವ

ಕಜ್ಜೀನಾಯಿ ಸಂತತಿಯ ಬಂಧ


ಮನೆಮಟವಿಲ್ಲವರಿಗೆ ಹಾದಿಬದಿಗಳೇ

ನಿಮ್ಮ ತೋಳ್ತೆಕ್ಕೆಗಳಾದ ಆಸರೆಯಲಿ

ಬೆಳಗಿನ ಹೊಸ ಬದುಕಿಗೆ

ನಡೆದು ಬಿಡುವರು ಮರುಗುಳಿಗಳಾಗಿ


ಚಟ್ಟವೇರಿದ ಶವಗಳದೂ ಉಂಟು

ನೀನಿರುವಲ್ಲಿಗೆ ಸವಾರಿ..

ಓಡುವರು ಗೊತ್ತುಗುರಿಯಿಲ್ಲದೆ

ಬಿತ್ತಿ ಹಳೆಯ ಕನಸುಗಳನೇ

ಅವು ನನಸಾದಾವೆಂಬ ಆಸೆಯೇರಿ..


ಕರಿ ನೀಳ ಡಾಂಬರು ರಸ್ತೆಗಳ

ಬೆಂಗಳೂರಿನ ಭವ್ಯನಾಡು

ಹರಿದ್ಹರಿದು ಚಿಂಧೀ ಆಯ್ದು ಬದುಕುವ

ಅಮಾಯಕ ಪುಟ್ಟ ಕೂಸುಗಳ ಭೀಡು


ಬಣ್ಣ ಬಳಿದು ಸೀರೆಯುಟ್ಟು ಓಲಾಡುವ

ನಾನವನಲ್ಲವೆಂಬ ನೀರೆಯರು

ಪಾರ್ಕಿಂಗ್, ಸಿಗ್ನಲ್ಗಳಲ್ಲಿ ಹರಿಹಾಯ್ದು

ಬೇಡಾಡಿ ಬದುಕುವ ಇವರೋರ್ಗೆಯರು


ಇದು ನಿಮ್ಮ ಜಗತ್ತು ಬಲುಮೋಜಿನದು

ಇರುಳಲ್ಲಿ ಕಾಡುವ ಹಗಲಲ್ಲಿ ಬೇಡುವ

ಓಟ ನಿಲ್ಲಿಸದ ಕಾದಾಟಗಳ ಮೇಳ

ಒಲ್ಲದ ಬಲಾತ್ಕಾರಗಳ ಕೇಳಿ...‌



Rate this content
Log in

Similar kannada poem from Tragedy