ಹಣತೆ
ಹಣತೆ
ದೀಪವೇ ನಿನ್ನ ಅರ್ಥ ನಾನು ತಿಳಿದೇ
ನೋವಿನಲ್ಲೂ ನಗು ಬೀರುವೆಯೇ
ಎಲ್ಲರನ್ನು ಬನ್ನಿ ಎಂದು ಕರೆಯುವೆಯೇ
ಅಂಧಕಾರವನ್ನು ನೀನೇ ಅಳಿಸಿದೇ
ನಿನ್ನಲ್ಲಿ ನಗು ಇರಲಿ ಎನ್ನುವವರು
ನಾನೇ ಹುಟ್ಟಿ ಬರುವೆನು ಹೇಳುವವರು
ಭಕ್ತಿ ಎನ್ನುವ ಹಣತೆ ಸೃಷ್ಟಿಸಿದವರು
ಎಲ್ಲರನ್ನು ಬನ್ನಿ ಎಂದು ನುಡಿದವರು
ದೇವರಿಗೆ ಭಕ್ತಿಯಿಂದ ಭಜಿಸೋಣ
ಎಣ್ಣೆಯೇ ನೀನೇ ಶ್ರೇಷ್ಠ ಎನ್ನೋಣ
ಬತ್ತಿಯನ್ನು ಹಾಕಿ ಪ್ರಾಥನೆ ಮಾಡೋಣ
ಮುಕ್ತಿ ಕೊಡು ಎಂದು ಬೇಡಿದೆನು
