ಸ್ವಾತಂತ್ರ್ಯ
ಸ್ವಾತಂತ್ರ್ಯ
ನಕ್ಕಳು ಭಾರತಾಂಬೆ ಈ ದಿನ
ಸಹಸ್ರ ಭಾರತೀಯರ ಜನ್ಮದಿನ
ಆಗಸದೆತ್ತರಕ್ಕೆ ಹಾರಿತು ತ್ರಿವರ್ಣ ಪತಾಕೆ
ತೀರಿತು ನಮ್ಮ ಬಹುದಿನದ ಬೇಡಿಕೆ
ಶಾಂತಿ ಕ್ರಾಂತಿ ತತ್ವಗಳ ಮೂಲಕ ಹೋರಾಟ
ನಿಂತಿತು ಕೊನೆಯಾಯಿತು ಈದಿನ ಬ್ರಿಟಿಷರ ಹಾರಾಟ
ತೊಡಿಸಿದರು ನೇತಾರರು ಭಾರತಾಂಬೆಗೆರತ್ನ ಕಿರೀಟ
ಸೇರಿತು ಈ ದಾಖಲೆ ಇತಿಹಾಸ ಸುವರ್ಣಪುಟ
ಹೊತ್ತಿತು ಕ್ರಾಂತಿಯ ಕಿಚ್ಚು ಮೂಲೆಮೂಲೆಯಲ್ಲೂ
ಸ್ವಾತಂತ್ರ್ಯಕ್ಕಾಗಿ ಕೂಗು ಮೂಡಿತು ದಿಕ್ಕು ದಿಕ್ಕಲ್ಲೂ
ಭಾರತೀಯರ ಹೋರಾಟಕ್ಕೆ ಸಿಕ್ಕಿತು ಗೆಲುವು
ಸ್ವಾತಂತ್ರ್ಯಕ್ಕಾಗಿ ಎಲ್ಲರಲ್ಲೂ ಮೂಡಿತ್ತು ಚಲವು.
