ಸುದಿನ
ಸುದಿನ
ಭಾರತಾಂಬೆಯ ವೀರ ಪತಾಕೆ ಬಾನೆತ್ತರಕ್ಕೆ ಹಾರಿದ ಸುದಿನ
ತ್ಯಾಗಿಗಳ ಬಲಿದಾನಕ್ಕೆ ಸಹಸ್ರ ಕೋಟಿ ನಮನ
ಕ್ರಾಂತಿ ಶಾಂತಿ ತತ್ವಗಳ ಉಗಮ ಸಂಗಮ
ಸಿಕ್ಕಿತು ಸಹಸ್ರ ಭಾರತೀಯರಿಗೆ ಹೊಸ ಜನುಮ
ಐಕ್ಯತೆ ಮಂತ್ರಕ್ಕೆ ಶರಣಾಯಿತು ಬ್ರಿಟೀಷ್ ಸೇನೆ
ತ್ರಿವರ್ಣ ದ್ವಜವು ಹಾರಾಡಿತು ಮನೆಮನೆ
ಮನೆ ಮನದ ತುಂಬಾ ದೇಶಭಕ್ತಿಯ ಸಡಗರ
ಸಂಭ್ರಮಕ್ಕೆ ಸಾಕ್ಷಿಯಾಯಿತು ಭವ್ಯ ಭರತ ಮಂದಿರ
ಕಲ್ಲುಮುಳ್ಳಿನ ಕಟ್ಟಿನ ಹಾದಿಯ ನಡಿಗೆ
ಅದು ಕೊನೆಗೂ ಕೊಂಡೊಯ್ಯಿತು ಸ್ವಾತಂತ್ರ್ಯದ ಕಡೆಗೆ
ಛಲ ಬಿಡದ ಹೋರಾಟಕ್ಕೆ ಸಿಕ್ಕ ಅಪರೂಪದ ಕೊಡುಗೆ
ಇಂದು ನಾವು ನೀವೆಲ್ಲರೂ ಆಚರಿಸುವ ಅಮೃತ ಗಳಿಗೆ
ಆಂಗ್ಲರ ಪಂಜರದಲ್ಲಿದ್ದ ಭಾರತಾಂಬೆ ಗಿಳಿ
ಇಂದು ಹಾರಿತು ಪಂಜರವ ಹೊಡೆದು ಆಗಸದ ಬಳಿ
ಮೂಲೆ ಮೂಲೆಯಲ್ಲೂ ಭಾರತಾಂಬೆಯ ಜೈಕಾರ ಮೊಳಗಲು ಸುತ್ತಲು
ಕೊನೆಯಾಯಿತು ಮರೆಯಾಯಿತು ಹಿಡಿದ ಗ್ರಹಣದ ಕತ್ತಲು
