ಸಂಭ್ರಮ
ಸಂಭ್ರಮ

1 min

55
ಸಂಭ್ರಮದ ನೆಲೆಗೆ ಶಂಕೆ ಮಾಡುವವರಾರು,
ಹಾರುವ ಹಕ್ಕೆಯು ಸದನ ಸೇರಿದೆ ಪಟ್ಟನೆ...
ಧಗೆಯ ನರ್ತನ ಸಾರಿದೆ ಸು-ಪರಿವರ್ತನ,
ಪರಿಸರದ ಹಸಿರನು ಶುಚಿಸಲು ಇಳಿದಿದೆ ತಣ್ಣನೆ...
ತಮ ಮೇಘಗಳ ಮೋಹ ಘರ್ಜನೆ,
ಗುಡುಗು ಸಿಡಿಲಿಸಿ ಧರೆಯ ಪಾಲಾಯಿತು ಪಾನಿಯವು ಮೆಲ್ಲನೆ...
ಕದನ ನಡೆದರು ನಡೆಯಬಹುದು ಆಗಸದಿ,
ಬಾನಿಂದ ವರ್ಷ ಧರೆಗಿಳಿದಾಗ ಸುಮ್ಮನೆ...