STORYMIRROR

pooja reddy

Romance Fantasy Others

4  

pooja reddy

Romance Fantasy Others

ನೀನೆಂದರೆ??

ನೀನೆಂದರೆ??

1 min
312

ಎಂದೋ ತಿಳಿದಿತ್ತು ಈ ಮನಸ್ಸಿಗೆ 

ನನ್ನ ಜೋಪಾನ ಮಾಡುವ ಸರದಾರ

ನೀನೇ ಎಂದು.. 

ನನ್ನ ಹೃದಯದೊಡಯ ನೀನೆಂದು !!

ನನ್ನ ಪ್ರತಿ ಗಳಿಗೆಯಲ್ಲೂ ಜೊತೆಯಿರುವೆಯೆಂದು.. 

ನನ್ನ ಕಾಲ್ಗೆಜ್ಜೆಯ ಸದ್ದಿಗೆ 

ನಿನ್ನ ಹೃದಯ ಮಿಡಿಯುವುದೆಂದು.. 

ಅದಕ್ಕೆ ತಕ್ಕ ಸಾಂತ್ವನ ನೀಡುವೆಯೆಂದು.. 

ಹೃದಯ ಸಾಮ್ರಾಜ್ಞನೇ... 

ನಿನಗೋಸ್ಕರ ಇರುವುದು ಈ ಜೀವ.. 


ಎಂದೋ ಈ ಮನಸ್ಸೊಳಗೆ ಲಗ್ಗೆ ಇಟ್ಟವಳು ನೀ.. 

ನಿನ್ನ ಜೋಪಾನ ಮಾಡುವ ಹೊಣೆ ನನ್ನದೇ     ಆಗಿದೆ !!

ನಿನ್ನ ಮೃದುವಾದ ಹಸ್ತಗಳನ್ನು 

ನನ್ನ ಹಸ್ತದೊಳಗೆ ಭದ್ರ ಪಡೆಸುವೆ.. 

ನಿನ್ನ ಕೋಮಲವಾದ ಪಾದಗಳಿಗೆ 

ಹೂವಿನ ಹಾಸಿಗೆಯಾಗುವೆ !!!

ಎಂದೂ ಅದಕ್ಕೆ ನೋವಾಗದಂತೆ... 

ಹೃದಯ ಸಾಮ್ರಾಜ್ಞಿಯೇ.. 

ನನ್ನೊಳಗೆ ಎಂದೋ ಬೆಸೆದಿದೆ ನಿನ್ನ ಜೀವ..

 




Rate this content
Log in

More kannada poem from pooja reddy

Similar kannada poem from Romance