STORYMIRROR

Vijaya Bharathi.A.S.

Abstract Fantasy Others

4  

Vijaya Bharathi.A.S.

Abstract Fantasy Others

ನನಸಾಗದ ಕನಸು

ನನಸಾಗದ ಕನಸು

1 min
469

ಪುಟ್ಟದೊಂದು ಹಟ್ಟಿಯಲ್ಲಿ

ಮಲಗಿ ಮಂದಲಿಗೆಯಲ್ಲಿ

ಮುಳುಗಿ ಹೋದೆ ನಿದ್ದೆಯಲ್ಲಿ

ಸುಳಿದು ಹೋಗಿ ಕನಸಿನಲ್ಲಿ

ಹುಣ್ಣಿಮೆಯ ಬೆಳದಿಂಗಳಲ್ಲಿ

ನದ ನದಿಗಳ ನಿನಾದವಲ್ಲಿ

ಕುದುರೆ ಏರಿ ಬಂದನಲ್ಲಿ

ಸುಂದರಾಂಗ ನನ್ನ ನಲ್ಲ

ನೀಲಿ ಮುಗಿಲ ನಡುವಿನಲ್ಲಿ

ನಲ್ಲನ ನಳಿನ ತೋಳಿನಲ್ಲಿ

ಮುಳುಗಿ ಪ್ರೇಮ ಭಾವದಲ್ಲಿ

ಉಲಿದು ಪಿಸು ದನಿಯಲ್ಲಿ

ನನಗೆ ನೀನು ನಿನಗೆ ನಾನು

ಜೀವ ಒಂದು ದೇಹ ಎರಡು

ಬೆರೆತು ಹೋಗಿ ಏಕವಾಗಿ

ದ್ವೈತವಳಿದು ಅದ್ವೈತ ವಾಗೆ

ಬೆಳಕು ಹರಿದು ಕೋಳಿಕೂಗೆ

ನಿದ್ರೆ ಹರಿದು ಕನಸು ಕರಗೆ

ಆ ಕ್ಷಣ ಅರಿವಾಯಿತೆನಗೆ

ಹೋ ನನಸಾಗದ ಕನಸಿದು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract