STORYMIRROR

ವಿದ್ಯಾತನಯ ವಿವೇಕ

Romance Classics Fantasy

4  

ವಿದ್ಯಾತನಯ ವಿವೇಕ

Romance Classics Fantasy

ರಂಗೋಲಿ

ರಂಗೋಲಿ

1 min
387

ಆಸೆಯೆಂಬ ಚುಕ್ಕಿಗಳನಿಟ್ಟು

ಬರೆದಿಹೆನು ನಿರೀಕ್ಷೆಯ ರಂಗೋಲಿ ,

ಬಾ ನಲ್ಲ ಜೀವನದ ರಂಗು

ತುಂಬು ನೀ ಇದರಲ್ಲಿ.

ಮೊದಲು ನೀ ತಾ

ಅರಿಸಿನದ ಬಣ್ಣ

ಸೌಭಾಗ್ಯವತಿಯಾಗಿಸು

ನೀ ಮೊದಲು ನನ್ನ.

ಪ್ರಣಯಕೆಂದಿರಲಿ

ಒಂದಷ್ಟು ಗುಲಾಲು

ಹಸುರಿರಲಿ ಬೇಕಲ್ಲ

ಸುಖ ಸಮೃದ್ಧಿಯ ಪಾಲು.

ಕೊಂಚವೇ ಬೇಕು

ಕಡುಗಪ್ಪು ಕೂಡ

ಬೇಸರದಿ ಇರುವೆ

ನಾ ನಿನ್ನ ಸಂಗಡ.

ಆಗಸದ ಬಣ್ಣವು

ಬೇಕು ಜೊತೆಜೊತೆಗೆ

ಸಾಗುತ್ತಲೇ ಇರಲಿ

ನಮ್ಮ ಬೆಳವಣಿಗೆ.

ನನ್ನ ರಂಗೋಲಿಗೆ

ನಿನ್ನದೇ ರಂಗು

ನಿನ್ನ ಸಾನ್ನಿಧ್ಯವೇ

ನನಗೆ ಮೆರಗು.

ಜೊತೆಯಲ್ಲೇ ಬಿಡಿಸುವ

ಸುಂದರ ಚಿತ್ತಾರ

ನಮ್ಮದಾಗಿಸಿಕೊಳ್ಳೋಣ

ಬಾಳೆಂಬ ಸಾಕ್ಷಾತ್ಕಾರ.

ಆಸೆಯೆಂಬ ಚುಕ್ಕಿಗಳನಿಟ್ಟು

ಬರೆದಿಹೆನು ನಿರೀಕ್ಷೆಯ ರಂಗೋಲಿ ,

ಬಾ ನಲ್ಲ ಜೀವನದ ರಂಗು

ತುಂಬು ನೀ ಇದರಲ್ಲಿ.



Rate this content
Log in

Similar kannada poem from Romance