STORYMIRROR

Harish k v Harish

Inspirational

2  

Harish k v Harish

Inspirational

ಜೀವನವೊಂದು ರಂಗಮಂಟಪ..

ಜೀವನವೊಂದು ರಂಗಮಂಟಪ..

1 min
172

ಜೀವನವೊಂದು ರಂಗಮಂಟಪ ಒಮ್ಮೆಯಾದರೂ ಮೆಟ್ಟಿ ನೋಡ

ವೇಷಭೂಷಣಗಳ ಧರಿಸಿಕೊಂಡು ಬಣ್ಣಗಳ ರುಚಿಯನ್ನು

ಸವಿದು ನೋಡ ಕೊಟ್ಟ ಗುಟ್ಟನ್ನು ಚಿತ್ತದಿ ಇಟ್ಟು ಪಾತ್ರವನ್ನು ಅನುಭವಿಸಿ ನೋಡ

ನೋವುಂಡರೂ ನಗುವಿನೊಡನೆ ಮಾದಪ್ಪನ ಪದವೊಂದ ಹಾಡಿ ನೋಡ


ಯಾರಿಗೂ ಕೇಡ ಬಯಸದೆ ನಿನ್ನ ಪಾಡಿನೊಡನೆ ನೀ ಕುಣಿದು ನೋಡ

ಅನ್ಯ ಮಾತುಗಳ ಇಣುಕಿ ನೋಡದೆ ತನ್ನದನ್ನೇ ಗರ್ವದಿ ಹಾಡ

ಬಂದು ಹೋದವರ ಚಿಂತೆಯನು ಬಿಟ್ಟು ಮಂಟಪದ ಮಡಿಲಲ್ಲೇ ಇದ್ದು ನೋಡ

ಸಿಕ್ಕ ಕಷ್ಟಗಳ ಸಹಿಸಿಕೊಂಡು ಪ್ರೇಕ್ಷಕರ ಮನವನ್ನು ಗೆದ್ದು ನೋಡ


ಕಣ್ಣೀರು ಮತ್ತು ಬೆವರಿನಿಂದ ಬಣ್ಣಗಳ ಕಾಳಜಿಯನು ನೀ ಮಾಡ

ಅತ್ತಿತ್ತ ಸುತ್ತ ಎತ್ತವೂ ನೋಡದೆ ಸಡಿಲಾದ ವೇಷವನು ಭಿಗಿಮಾಡ

ತನ್ನದಲ್ಲದ ಮಾತುಗಳು ತಣ್ಣಗಿದ್ದರು ಅವುಗಳು ನಿನಗೆ ಬೇಡ

ಜೀವನದ ನಾಟಕದಲ್ಲಿ ಎಂದಿಗೂ ನೀ ಸುಮ್ಮನೆ ಕೂರಬೇಡ                                              


Rate this content
Log in

Similar kannada poem from Inspirational