ಶುಭಾಶಯಗಳು..
ಶುಭಾಶಯಗಳು..
ಚಂದಿರನ ಎದೆಯಿಂದ ಹೊಸದಾದ ಬೆಳಕೊಂದು ಬೀಳುತಿದೆ
ರಾತ್ರಿಯ ಚಳಿಗಾಳಿಯು ಬೆಚ್ಚನೆಯ ಸಂದೇಶಒಂದ ತಂದಿದೆ
ಆಗಸದಿಂದ ಮೋಡಗಳ ಗುಂಪೊಂದು ಉಡುಗೊರೆಯೇನೆಂದು ಕೇಳುತಿವೆ
ಎಲ್ಲಿಂದಲೋ ಬಂದ ನೆನಪಿನ ಓಲೆಯು ನಿನ್ನ ಜನುಮದಿನವೆಂದು ತಿಳಿಹೇಳುತಿದೆ.
ಕೋಗಿಲೆಯ ಧನಿಯಿಂದು ಮೊದಲಿಗಿಂತ ಇಂಪಾಗಿದೆ
ನೈದಿಲೆಯ ಗಂಧವು ನಿನ್ನನ್ನೇ ಹುಡುಕುತಿದೆ
ಕಾಡಿಗೆಹೊತ್ತ ಕಣ್ಣುಗಳು ಸಂಭ್ರಮದಿ ಕುಣಿಯುತಿವೆ
ನಿನ್ನ ಮುಂಗುರುಳಿನ ಸಾಲುಗಳು ಕೆನ್ನೆಗೆ ಮುತ್ತಿಕ್ಕಿ ಶುಭಾಶಯವನು ತಿಳಿಸುತಿವೆ
ಸುಮಧುರ ಸುಮಗಳು ನಿನ್ನ ಮುಡಿಯೇರಿ ಮೆರೆಯುತಿವೆ
ಈ ಸುಂದರ ಸೊಗಸಿನರಸಿಯು ಇಲ್ಲಿಲ್ಲವಲ್ಲಾ ಎಂದು ಸ್ವರ್ಗವು
ನಾಚುತಿದೆ ಸಂಗೀತದ ಲಹರಿಗಳು ನಿನ್ನ ಬಳಿಬಂದು ಆಶೀರ್ವದಿಸಿವೆ
ಇವೆಲ್ಲವನ್ನು ಕಂಡು ನಿನಗೆ ದೃಷ್ಟಿಯಾಗಬಹುದೆಂದು ನನಗೆ ಗಾಬರಿಯಾಗಿದೆ.
