STORYMIRROR

Harish k v Harish

Inspirational

2  

Harish k v Harish

Inspirational

ಅರುಣೋದಯ

ಅರುಣೋದಯ

1 min
504

ಮೂಡಣದ ಗಿರಿ ಒಡಲು ಬೆಳಕೊಂದ ಕಂಡಿರಲು

ಕಿರಣದ ಕಾಂತಿಗೆ ತಮವು ಸೋರಿ ಚುಕ್ಕಿಸಾಲು

ಜಾರಿರಲು ಬಾನಿನ ಚೆಲುವ ಕಂಡು ಶಶಿಯು ನಾಚಿ ಕರಗಿರಲು

ಕತ್ತಲಂಚಿನಲಿ ಅರುಣೋದಯ!


ಬೆಳಕಿನ ಕಾಂತಿಯೊಡೆತಕೆ ಮಂಜಿನ ಹನಿಯು ಕರಗಿರಲು

ವಸಂತದ ಮುತ್ತಿನ ಮಣಿಯು ತಾಕಿ ಕೊರಡು ಕೊನರಿರಲು

ಹೂ ರಾಶಿ ಅರಳಿ ತಾನು ಎದೆಯ ಚಾಚಿರಲು

ಬೆಳಕಿನಂಗಳದಲಿ ಅರುಣೋದಯ!


ನಿದಿರೆಯ ಮಡಿಲಿನಲಿ ಬೆಚ್ಚನೆಯ ಹಾಸಿನಲಿ ಕನಸೊಂದು ಚಿಗುರಿರಲು

ತಾಯ ಕೂಗೋದು ಮರಳಿ ಬಳಿಬಂದು ಕರ್ಣ ಕಮಲಗಳನು ಅರಳಿಸಿರಲು

ಕೋಗಿಲೆಯ ಧನಿ ಕೇಳಿ ಪಕ್ಷಿಗಳ ಇಂಪರಡಿ ಜಗವು

ಜಗಮಗಿಸಿರಲು ಕಣ್ಣ ತೆರೆಯಲು ನೋಡು ಅರುಣೋದಯ!                                            


Rate this content
Log in

Similar kannada poem from Inspirational