STORYMIRROR

Harish k v Harish

Fantasy

2  

Harish k v Harish

Fantasy

ಕಲ್ಪನೆಯ ಹಾದಿಯಲ್ಲಿ......

ಕಲ್ಪನೆಯ ಹಾದಿಯಲ್ಲಿ......

1 min
117

ಖಾಲಿ ಹಾಳೆಯ ಮುಂದೆ ಕೈಚಾಚಿ ನಿಂತಿರುವೆ

ಯೋಚನೆಯ ಗೂಡನ್ನು ಮರಳಿ ಕೆದಕಿರುವೆ

ಲೇಖನಿಯ ಹಿಡಿದು ಏನನ್ನೋ ಬರೆದಿರುವೆ

ಬರೆದ ಸಾಲನ್ನು ಓಡಲಾರದೆ ಅಳಿಸಿರುವೆ

ಬಣ್ಣಗಳ ಕುಂಚದಲ್ಲಿ ಬಣ್ಣನೆಯನು ಬಿಡಿಸಿರುವೆ


ಕಡು ಕಪ್ಪು ಶಾಯಿಯಲಿ ಬೆಳಕಿನ ಹಾದಿಯನು ಬರೆದಿರುವೆ

ಕೂಡಿಸುತ ಭಾಗಿಸುತ ಪದಗಳನು ಪೋಣಿಸುತ ಕವಿತೆಯ ಹಾರವನು ರಚಿಸಿರುವೆ

ಅತಿಯಾದ ಪದಗಳನು ಮಿತಿಯಾಗಿ ಬಳಸುತ ಪ್ರೀತಿಯ ಓಲೆಯನು ಗೀಚಿರುವೆ

ಮೋಡಗಳ ಮರೆಯಿಂದ ಚುಕ್ಕಿಸಂಕುಲದ ಆಗಮನಕ್ಕಾಗಿ ಕಲ್ಪನೆಯ ಗುಡಿಯಲಿ ಕಾದಿರುವೆ


ನೆನಪಿರದ ಪದಗಳ ಹಿಂದೆ ಓಡುತ ಮರೆಯಾಗದ

ನೆನಪುಗಳನು ಮರೆತಿರುವೆ

ಎಲ್ಲಿಗೂ ಹೋಗದಂತ ಹಾದಿಯನ್ನು ಹಿಡುದು ಎಲ್ಲಿಗೋ ಹೊರಟಿರುವೆ

ಅರಿವಿಗೇ ಸಿಗದಂತ ಸಾಲನ್ನು ಹುಡುಕುತಲಿ ಕಾವ್ಯದ

ಗಡಿಯನ್ನು ತಲುಪಿರುವೆ

ಇನ್ನೂ ಹೆಸರಿಡದ ಮುದ್ದಾದ ಕೂಸನ್ನು ಚೆಂದದಿ ಸಿಂಗರಿಸಿರುವೆ                                       


Rate this content
Log in

Similar kannada poem from Fantasy