STORYMIRROR

JAISHREE HALLUR

Romance Fantasy Others

4  

JAISHREE HALLUR

Romance Fantasy Others

ಮುಂಜಾನೆ ಚಳೀಲಿ

ಮುಂಜಾನೆ ಚಳೀಲಿ

1 min
343

ಹೀಗೊಮ್ಮೆ 

ಮುಂಜಾನೆ ಚಳೀಲಿ

ಕುಳಿತಾಗ ...


ಈ ಬಿಳೀ ಪರದೇಲಿ

ನಿನ್ನೆ ಕಂಡ ಕನಸು

ನೀನಿದ್ದೆ ಅಲ್ಲಿ ಆಗ

ವರ್ಣರಂಜಿತವಾಗಿ ಮೂಡಿ

ಒಲವ ಕಂಗಳ ನೋಟದಲಿ

ಜೀವತುಂಬಿ 

ಕೈ ಚಾಚಿ ಕರೆದಿದ್ದೆ

ನಾ ಒಲ್ಲೆ ಎಂದಿದ್ದೆ, ನೀ

ಮುನಿದು ಸುಮ್ಮನಾದೆ


ಆದರೆ, 

ದಿನವಿಡೀ ನಿನ್ನ ನೆನಪೇ

ಮರೆತರೂ ಕಾಡುತಲೇ ಇರುವ

ಕಾಲೀ ಪರದೆಯ ಮೇಲೆ

ಚಾಚಿದ ಕೈಗಳ ಬೇಡಿಕೆ

ಯಾಕೋ ಮನ ಬಿಕ್ಕಳಿಸಿತು

ನಾ ಹಾಗೆ ಮಾಡಬಾರದಿತ್ತು

ನೀ ಕರೆದೊಡನೆ ಹೋಗಬೇಕಿತ್ತೆಂದು


ಆದರೂ,

ನನ್ನಿಂದಾಗದ ಸಾಹಸವದು

ನಿನ್ನದೇ ಪ್ರಪಂಚ ಸುಂದರ

ಸ್ವೇಚ್ಚೆಯಲಿ ಹಾರಾಡುವ ಲೋಕ

ನಾನದಕೆ ಹೊರತು ಗೆಳೆಯಾ

ಇಹುದಿಲ್ಲಿ ನಿಜದ ಬದುಕು

ಬಂಧಗಳ ಗಟ್ಟಿ ಸರಪಳಿ

ಮನಸಿನೊಳಗಿನ ಅಗುಳಿ

ಕನಸನಷ್ಟೇ ಕಾಣುವ ಪಾಳಿ...



Rate this content
Log in

Similar kannada poem from Romance