ಪ್ರಯಾಣ
ಪ್ರಯಾಣ
ಮಾಡಬೇಕಿದೆ ನಿನ್ನ ಜೊತೆಗೊಂದು
ಮರೆಯದ ಪ್ರಯಾಣ
ಮನದಲ್ಲಿ ಅಡಗಿದ ಮಾತು
ಮತ್ತು ಭಾವನೆಗಳನ್ನು ಹಂಚಿಕೊಳ್ಳಲು ಬೇಕಿದೆ ಪ್ರಯಾಣ|
ಮನೆಯಾಯಿತು,ಮಕ್ಕಳಾಯಿತು
ನಮಗಾಗಿ ಮಾಡೋಣ ಪ್ರಯಾಣ
ಎಲ್ಲವನ್ನೂ ಒಂದು ಹಂತಕ್ಕೆ
ತಂದದ್ದಾಯಿತು ಬಾ ಇನ್ನು ಮಾಡೋಣ ಪ್ರಯಾಣ|
ಕಳೆದು ಹೋದ ರಸಗಳಿಗೆಯನ್ನು
ಮತ್ತೆ ಪಡೆಯೋಣ
ಅದಕ್ಕಾದರು ಮಾಡೋಣ
ಒಂದು ಸುದೀರ್ಘ ಪ್ರಯಾಣ|
ಸರಸ-ಸಲ್ಲಾಪಗಳು
ಒಂದಿಷ್ಟು ತುಂಟಾಟಗಳು
ಮತ್ತೆ ಸೇರೋಣ,ಒಂದುಗೂಡೋಣ
ಪ್ರಣಯಕ್ಕೆ ಸಾಕ್ಷಿಯಾಗಲಿ ಈ ಪ್ರಯಾಣ|

