STORYMIRROR

Harish k v Harish

Fantasy

2  

Harish k v Harish

Fantasy

ಹರಿದುಹೋದ ಹಾಳೆಯಲ್ಲಿ.....

ಹರಿದುಹೋದ ಹಾಳೆಯಲ್ಲಿ.....

1 min
96

ಹರಿದುಹೋದ ಹಾಳೆಯಲ್ಲಿ ಪದಗಳ ಹೋರಾಟವು ಜೋರಾಗಿಯೇ ಸಾಗಿದೆ

ಏನನ್ನೋ ಹೇಳಹೊರಟ ಸಾಲುಗಳು ಅಲ್ಲಲ್ಲಿ ಮುರಿದುಹೋಗಿವೆ

ಜಾಗವು ಸಾಲದಾಗಿ ಒಂದಕ್ಕೊಂದು ಡಿಕ್ಕಿಹೊಡೆದು ನಡುವಲ್ಲಿ ಬೀಳುತಿವೆ

ಆದರೂ ಮೇಲೆದ್ದ ಶಬ್ದಗಳು ಛಲಬಿಡದೆ ಓಡುತಿವೆ


ಕಡುಕಪ್ಪು ಶಾಯಿಯ ಸಿಹಿಬೇಕೆಂದು ಬೆಳ್ಳಗಿನ ಪುಟಗಳ ಕರೆಬಂದಿದೆ

ಅವಸರದ ಕೈಒಂದು ಬೇಸರದ ಲೇಖನಿಯ ಹಿಡಿದು ಪುಟ್ಟಪುಟ್ಟ ಅಕ್ಷರಗಳನು ಜೋಡಿಸಿದೆ

ಅಮಾವಾಸ್ಯೆ ಕತ್ತಲಲ್ಲಿ ಭಾವನೆಗಳ ದೀಪವು ಕಾಲ್ಪನಿಕ ಯುದ್ಧಕ್ಕೆ ಸಾಕ್ಷಿಯಾಗಿದೆ

ಕತ್ತಿ ಗುರಾಣಿಗಳಿಲ್ಲದ ಯುದ್ದದಲ್ಲಿ ಪದಗಳ ಸಂಕಲನವು ಹೊಸದಾದ ಸಂಚಲನವನು ಸೃಷ್ಟಿಸಿದೆ


ಹೋತುಗೊತ್ತಿರದ ಬಯಕೆಗಳು ಒತ್ತಕ್ಷರವು ಬೇಕೆಂದು ಆಜ್ನ್ಯಾಪಿಸಿದೆ

ಎಂದಿಗೂ ಕತ್ತಲಾಗದ ಬಣ್ಣಗಳ ಊರಿನಿಂದ ಬಣ್ಣನೆಗಳ ಬೇಡಿಕೆಯು ಬಂದಿದೆ

ಅಲ್ಲಲ್ಲಿ ಹರಿದುಹೋದ ಹಾಳೆಯ ಮಡಿಲಿನಲ್ಲಿ ಮುದ್ದಾದ ಪದಗಳು ಜನಿಸಿವೆ

ಲೇಖನಿಯ ಗೂಡಬಿಟ್ಟ ಪದಗಳು ಬದಲಾವಣೆಯ ಬಾನಿನಲ್ಲಿ ಹಾರಲಿಚ್ಚಿಸಿವೆ                                                  


Rate this content
Log in

Similar kannada poem from Fantasy