ಒ ಅಳುವೆ ನೀನೇಕೆ ಹೀಗೆ
ಒ ಅಳುವೆ ನೀನೇಕೆ ಹೀಗೆ
ಒ ಅಳುವೆ ಮರೆಯದೆ ಹೇಳು ಒ ಅಳುವೆ ಮರೆಯದೆ ಹೇಳು
ದುಃಖದ ದೀಪವ ಹಿಡಿದು ನೀನೇಕೆ ನಗುತಿರುವೆ
ಕಾಯಿಸದೆ ಹೇಳು ನನಗೆ ಕಂಬನಿಯೇ ಬೇಕೇ ನಿನಗೆ
ನೋವನ್ನೆ ನೀಡುವೆ ನನಗೆ ನೀನೇಕೆ ಹೀಗೆ
|ಒ ಅಳುವೆ ಮರೆಯದೆ ಹೇಳು|
ಮರೆಯಾಗದ ನೋವೆಲ್ಲವ ಕೊಡುವುದನು ನೀ ಕಲಿತೆ
ಕಣ್ಣೀರಿನ ಮಳೆಯಲ್ಲಿಯೆ ಕೊಡೆಯಿರದೆ ನಾ ನೆನೆದೆ
ಕುಡಿಯೊಡೆದಿದೆ ಕಣ್ಣೀರಿದು ನೆನೆಯುತಲಿ ನಿನ್ನ ಮಳೆಗೆ
ದುಃಖದ ಸಿಂಚನದಲ್ಲಿ ಮುಳುಗಿಸುವೆ ನನ್ನನು ಏಕೆ
ಉತ್ತರಿಸು ಕಾಡದೆ ಒಮ್ಮೆ ನೀನೇಕೆ ಹೀಗೆ
|ಒ ಅಳುವೆ ಮರೆಯದೆ ಹೇಳು|
ಬೇಕಾಗದ ಬೇಗುದಿಯನು ಬಡಿಸುವ ಆಸೆ ಏನು
ಸಂತೋಷವ ಬದಲಾಯಿಸೋ ಪರಿಭಾವ ಸಾಕಿನ್ನು
ಕೈ ಮುಗಿವೆನು ಕನಸಲ್ಲಿಯು ಬಾರದಿರು ನನ್ನಾ ಜೊತೆಗೆ
ಕಣ್ಗಳ ಬಾಗಿಲಿನಿಂದ ಹೊರಬರುವ ಬಯಕೆಯೆ ನಿನಗೆ
ನಕ್ಕುಬಿಡು ಹಾಗೆ ಒಮ್ಮೆ ಅಳಬೇಡ ಹೀಗೆ
ಒ ಅಳುವೆ ಮರೆಯದೆ ಹೇಳು ಒ ಅಳುವೆ ಮರೆಯದೆ ಹೇಳು
ದುಃಖದ ದೀಪವ ಹಿಡಿದು ನೀನೇಕೆ ನಗುತಿರುವೆ
