Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

ಮೌನಿ ❣

Fantasy Inspirational Children

4  

ಮೌನಿ ❣

Fantasy Inspirational Children

ಲಾಲಿ ಹಾಡು

ಲಾಲಿ ಹಾಡು

1 min
767


ಬೆಳದಿಂಗಳ ತೊಟ್ಟಿಲಲ್ಲಿ ನಗುವ

ಹೊತ್ತು ಬಂದಿರುವ ಚಂದಮಾಮ

ಸೂರ್ಯನ ಕಳಿಸಿ ನಗುವ ರಾತ್ರಿಗೆ

ತಂಗಾಳಿಯ ತಂಪಲ್ಲಿ ಹಾಡುತ ಲಾಲಿಯ

ಜೋ.... ಜೋಜೋ ಜೋ.....ಜೋಜೋ ॥ 2 ॥

ಚುಕ್ಕಿ ತಾರೆಗಳು ಕೂಡಿ ಬರುವ

ಚಂದದ ಕಥೆಗಳು ಹೊತ್ತು ತರುವ

ಹಾಲ್ಬಿಳುಪಿನ ರಾತ್ರಿಗಳಲ್ಲಿ

ನನ್ನ. ಹಿಂದೆ ಹಿಂದೆ ಅಲೆವ

ಜೋ.... ಜೋಜೋ ಜೋ.....ಜೋಜೋ ॥ 2 ॥

ಕಾಡುವ ಕೂಸಿಗೆ ಆ ಶಶಿಯ

ತೋರಿಸಲು ಮಗುವೆ ಮೂಕವಿಸ್ಮಿತ

ಅಂದದ ಕಥೆಗಳಲ್ಲಿ ಸುಂದರ ನಾಯಕ

ನೀ ಚಂದಮಾಮ ನೀನಗಾರು ಸಮ

ಜೋ.... ಜೋಜೋ ಜೋ.....ಜೋಜೋ ॥ 2 ॥

ಅಮ್ಮನ ಮಡಿಲ ಮೇಲೆ ಮಲಗಿ

ಖಾಲಿ ಆಕಾಶದಿ ಮೋಡಗಳ ಮರೆಯಲ್ಲಿ

ನಕ್ಷತ್ರಗಳ, ಚುಕ್ಕಿ ತಾರೆಗಳು ಜೊತೆಗೆ

ಕಾಣುವ ಪ್ರತಿ ಕ್ಷಣ ಬದುಕಿಗೆ ನೆನಪಿನ ಬುತ್ತಿ

ಜೋ.... ಜೋಜೋ ಜೋ.....ಜೋಜೋ ॥ 2 ॥

ಕನಸುಗಳು ಬಿತ್ತಲು ಬಾ ನೀನು

ನನ್ನ ಗುಟ್ಟುಗಳು ಅಡಗಿಸುವ ಕಿವಿ ನೀ

ಪ್ರತಿ ಪ್ರಶ್ನೆಯ ಉತ್ತರ ಹುಡುಕುವ ಜೊತೆಗಾರ

ಮನಸ್ಸು ಮರೆಸುವ ಸುಂದರ ಕಾವ್ಯ ಚಿತ್ರ

ಜೋ.... ಜೋಜೋ ಜೋ.....ಜೋಜೋ ॥ 2 ॥


Rate this content
Log in

Similar kannada poem from Fantasy