ನೀ ಅಂದರೆ
ನೀ ಅಂದರೆ
ಒಲವಿನ ಒಂದು ಅಪ್ಪುಗೆ ಸಾಕು ನಾ ಮರೆಯಲು
ನನ್ನಲ್ಲಿ ಅಡಗಿದ ಎಲ್ಲಾ ನೋವುಗಳ ಮರೆಯಲು
ಚಂದದ ಆ ಅಪ್ಪುಗೆಯಲ್ಲೇ
ನಾ ಕಂಡೆ ತಂದೆಯಲ್ಲಿ ಸಿಗುವ
ಭದ್ರತೆಯ ಭಾವವ
ಹಾಗೆ ಸುಮ್ಮನೆ ಬಂದು ಅಪ್ಪುವ
ಆ ಚಂದದ ಅಪ್ಪುಗೆ
ತಾಯಿಯ ಮಕ್ಕಳು ಅಪ್ಪುವಂತೆ
ತರಲೆ ಮಾಡುತ್ತ ಕೀಟಲೆಯಲ್ಲಿ
ಅಪ್ಪುವ ಅಪ್ಪುಗೆಯಲ್ಲೇ
ನಾ ಕಂಡೆ ಸಹೋದರನ
ನಿನ್ನ ಪ್ರತಿ ಅಪ್ಪುಗೆಯು
ತಿಳಿಸುವುದು ನನ್ನ ಮೇಲಿನ
ಮೂಗಿಯಲಾರದ ಕಾಳಜಿಯ
ನೀ ತಿಳಿದಿರುವೆ ನನ್ನ ಅಂತರಾಳದ
ಮನದ ಮಾತುಗಳ
ತಿಳಿಯದೆಯು ನೀ ಅಪ್ಪಲಾರೆ
ನಾ ಮುಜುಗರವಾಗುಂತೆ
ನನ್ನೇಲ್ಲ ನಂಬಿಕೆ ನೀ ಅಲ್ಲವೇ....!
# lovelanguage

