ಪುಟ್ಟಿಯ ತಲೆಹರಟೆ
ಪುಟ್ಟಿಯ ತಲೆಹರಟೆ
ಊಟದ ಹೊತ್ತಿಗೆ ಕುರುಕಲು ಬೇಕೆಂದು
ಪುಟ್ಟಿ ಮಾಡಿಯೇ ಬಿಟ್ಟಳೊಂದು ತಲೆ ಹರಟೆ
ಊಟದ ಹೊತ್ತಿಗೆ ಊಟವೇ ಮಾಡೆಂದು
ಅವಳಮ್ಮ ನುಡಿದಾಗ ಶುರುವಾಯಿತು ಪುಟ್ಟಿಯ ಗಲಾಟೆ!!
ಕುರುಕಲು ಬೇಡಮ್ಮಾ ಊಟ ಮಾಡಲು
ಕೊಡಬೇಕು ನಿನ್ನ ಮೊಬೈಲ್ ಎಂದು
ಪುಟ್ಟಿ ಮಾಡಿದಳು ನೋಡಿ ತಲೆ ಹರಟೆ
ಪುಟ್ಟಿಯ ಹರಟೆಯ ಬಿಡಿಸುವುದೇ ಅವಳಮ್ಮನಿಗೆ ದೊಡ್ಡ ಚಿಂತೆ!!
ಪುಟ್ಟಿಗೆ ಊಟ ಮಾಡಿಸುವುದೆಂದರೆ
ಅಮ್ಮನಿಗೆ ಬಹು ದೊಡ್ಡ ಕೆಲಸ
ಊಟ ಮಾಡುವಾಗ ಫೋನ್ ನೋಡಬಾರದೆಂದರೆ
ಹಠ ಮಾಡುವಳು ಫೋನ್ ಬೇಕೆಂದು ದಿವಸ!!
ಅಮ್ಮನು ಮಾಡಿದಳೊಂದು ಉಪಾಯವ
ಕರೆದೊಯ್ದಳು ಪುಟ್ಟಿಯನು ಅಂಗಳಕೆ
ಆಟವಾಡಿಸುತ್ತಾ ಮಾಡಿಸಿದಳವಳು ಊಟವ
ಹಠ ಬಿಟ್ಟು ಊಟ ಮಾಡಿದ ಪುಟ್ಟಿಯದು ನೋಡಿ ಕೇಕೆ!!