STORYMIRROR

Achala B.Henly

Children Stories Comedy Children

4  

Achala B.Henly

Children Stories Comedy Children

ಪುಟ್ಟನ ಬಿಂದಿಗೆ

ಪುಟ್ಟನ ಬಿಂದಿಗೆ

1 min
395


ಪುಟ್ಟನಿಗೇಕೋ ಇಂದು ಬಿಂದಿಗೆ

ಬಲು ಪ್ರಿಯವೆನಿಸಿದೆ,

ಅಜ್ಜಿ ಮನೆಯ ಕಿತ್ತಳೆ ಬಿಂದಿಗೆ ಮೇಲೆ ಒಲವಾಗಿಬಿಟ್ಟಿದೆ..!!



ಇಡೀ ದಿನ ಪುಟ್ಟನಿಗೆ ಗಿಡಗಳಿಗೆ

ನೀರುಣಿಸುವುದೇ ಕೆಲಸವೆಂದು ತಿಳಿದರೆ, 

ಅದೇಕೆ ಬಿಳಿ ಬಟ್ಟೆ ಇನ್ನೂ

ಶುಭ್ರವಾಗಿಯೇ ಉಳಿದಿದೆ..? 



ಅಲ್ಲೇ ಗೊತ್ತಾಯಿತಲ್ಲವೇ, ಪುಟ್ಟ ಆಡುತ್ತಿರುವುದು ಖಾಲಿ ಬಿಂದಿಗೆಯ ಜೊತೆ ಎಂದೇ..?

ಆದರೂ ಪುಟ್ಟನ ಅನುಕರಣೆಗೊಂದು

ಚಪ್ಪಾಳೆ ತಟ್ಟಲೇಬೇಕಲ್ಲವೇ..!! 



ಎಷ್ಟೇ ತುಂಟಾಟ ಮಾಡಿದರೂ,

ಪುಟ್ಟ ಅಜ್ಜಿ ತಾತನ

ಪ್ರೀತಿಯ ಮೊಮ್ಮಗನಲ್ಲವೇ..? 



ತನ್ನ ಪುಟ್ಟ ಕೈಗಳಿಂದ ದೊಡ್ಡ ಕೆಲಸ ಮಾಡಿ, ಇಬ್ಬರಿಂದಲೂ ಹೇಳಿಸಿಕೊಳ್ಳುತ್ತಾನೆ: 

"ನಮ್ಮ ಪುಟ್ಟ ತುಂಟನಾದರೂ ಬಲು ಜಾಣನಲ್ಲವೇ..?!"



Rate this content
Log in