ಕರಗಿರುವ ನಿನ್ನೆಗಳ ಕಣ್ಣಲ್ಲಿ ನಾಳೆ
ಕರಗಿರುವ ನಿನ್ನೆಗಳ ಕಣ್ಣಲ್ಲಿ ನಾಳೆ
ಕರಗಿರುವ ನಿನ್ನೆಗಳ ಕಣ್ಣಲ್ಲಿ ನಾಳೆಗಳು
ನಿನ್ನ ಕಣ್ಣುಗಳಲ್ಲಿ ಕಂಡೆನು ಪ್ರೀತಿಗಳು
ತಂಪಾಗಿ ಮನ ಸೆಳೆಯುವ ಹನಿಗಳು
ಮನಕ್ಕೆ ಇಷ್ಟಪಡುವ ಆ ಮುತ್ತುಗಳು
ನಿನ್ನ ಕಣ್ಣಲ್ಲಿ ಮೂಡಿತು ಹೊಸ ಭರವಸೆಗಳು
ನೀನು ಕೋಗಿಲೆಯ ಹಾಗೆ ಮುದ್ದು ದ್ವನಿಗಳು
ಅಗಸದಲ್ಲಿರುವ ಸೊಗಸಾದಂತಹ ನಕ್ಷತ್ರಗಳು
ನದಿಗಳಲ್ಲಿ ಮೂಡುವಂತಹ ಹೊಸ ಅಲೆಗಳು
ಮರಗಳಲ್ಲಿ ಗೂಡುಕಟ್ಟುವಂತಹ ಹಕ್ಕಿಗಳಂತೆ
ಪ್ರೀತಿಯ ಹುಡುಗರ ಮನವ ಸೆಳೆಯುವಂತೆ
ನಾನು ತೇಲಿಹೋದೆನು ಮುದ್ದಾದ ಹನಿಗಳಂತೆ
ನಾನು ನನ್ನ ಬಂದು ಕರೆದುಕೊಂಡು ಹೊಂದಂತೆ
ನಿನ್ನ ಕಣ್ಣುಗಳಲ್ಲಿ ಸಾವಿರಾರು ನೆನಪುಗಳಿವೆ
ಪ್ರೀತಿಯ ಹಾಲಿಗೆ ನೀನು ಜೇನು ಸೇರಿಸುವೆ
ನಾನು ನಿನಗಾಗಿ ಹೊಸ ಕವಿತೆ ಬರೆಯುವೆ
ನಿನ್ನ ಮನವು ನಿನಗಾಗಿ ತೆರೆದುಕೊಂಡಿವೆ